ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ಬೆಳೆಗಾರರಿಗೆ ಎಕರೆಗೆ ₹1,500 ಸಹಾಯಧನ

Last Updated 30 ಏಪ್ರಿಲ್ 2022, 10:47 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್ ಸರ್ಕಾರ ಇನ್ಮುಂದೆ ಅಲ್ಲಿನ ಭತ್ತದ ಬೆಳಗಾರರಿಗೆ ಪ್ರತಿ ಎಕರೆಗೆ ₹1,500 ಸಹಾಯಧನ ನೀಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಭಗವಂತ್ ಮಾನ್ ಅವರು ವಿಡಿಯೊ ಸಂದೇಶದಲ್ಲಿ ಈ ವಿಚಾರ ಪ್ರಕಟಿಸಿದ್ದಾರೆ.

ನೇರ ಭತ್ತದ ಬಿತ್ತನೆ (ಡಿಎಸ್‌ಆರ್) ವಿಧಾನದ ಮೂಲಕ ರೈತರು ತಮ್ಮ ಹೊಲದಲ್ಲಿ ಭತ್ತ ಬಿತ್ತಿದರೆ ಅವರಿಗೆ ಎಕರೆಗೆ ₹1,500 ನೀಡಲಾಗುವುದು ಎಂದಿದ್ದಾರೆ.

ಡಿಎಸ್‌ಆರ್ ವಿಧಾನವೂ ನೂತನ ಕೃಷಿ ಪದ್ದತಿಯಾಗಿದ್ದು, ಇದರಿಂದ ಏಕಕಾಲದಲ್ಲಿ ಭತ್ತದ ಬಿತ್ತನೆ ಹಾಗೂ ಕಳೆನಾಶಕವನ್ನು ಹಾಕಬಹುದು. ಸಾಂಪ್ರದಾಯಿಕ ಭತ್ತದ ನಾಟಿಗಿಂತ ಇದು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT