ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಕಿಲೋವ್ಯಾಟ್‌ವರೆಗಿನ ವಿದ್ಯುತ್ ಬಿಲ್ ಮನ್ನಾ: ಪಂಜಾಬ್ ಸರ್ಕಾರ ನಿರ್ಧಾರ

Last Updated 29 ಸೆಪ್ಟೆಂಬರ್ 2021, 10:59 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್ ಸರ್ಕಾರವು ಬುಧವಾರ 2 ಕಿಲೋವ್ಯಾಟ್‌ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವವರ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 1200 ಕೋಟಿ ಹೊರೆಯಾಗಲಿದೆ.

ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ನೇತೃತ್ವದಲ್ಲಿನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದೇವೇಳೆ, ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕಗಳನ್ನು ಮರುಸ್ಥಾಪಿಸಲು ಪಂಜಾಬ್ ಕ್ಯಾಬಿನೆಟ್ ನಿರ್ಧರಿಸಿದೆ.

ಈ ಬಗ್ಗೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಚನ್ನಿ, ‘ರಾಜ್ಯದಲ್ಲಿ 2 ಕಿಲೋವ್ಯಾಟ್‌ ಲೋಡ್ ಹೊಂದಿರುವ ಶೇಕಡಾ 80 ರಷ್ಟು ಗ್ರಾಹಕರನ್ನು ಹೊಂದಿದ್ದೇವೆ. ಅವರ ಬಾಕಿ ಬಿಲ್ ಮನ್ನಾ ಮಾಡಲಾಗುವುದು ಮತ್ತು ಸರ್ಕಾರದಿಂದ ಇದನ್ನು ಭರಿಸಲು ನಿರ್ಧರಿಸಿದ್ದೇವೆ’ಎಂದು ಹೇಳಿದ್ದಾರೆ.

ಪಿಎಸ್‌ಪಿಸಿಎಲ್‌ಗೆ ಸರ್ಕಾರವು ಗ್ರಾಹಕರ ಬಾಕಿ ಪಾವತಿಸುತ್ತದೆ ಎಂದು ಅವರು ಹೇಳಿದರು.

ಇದರಿಂದ ರಾಜ್ಯದ ಖಜಾನೆಗೆ ₹1,200 ಕೋಟಿ ಆರ್ಥಿಕ ಹೊರೆಯಾಗಲಿದೆ ಎಂದು ಚನ್ನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT