ಭಾನುವಾರ, ಜೂನ್ 26, 2022
26 °C

ಕುತುಬ್ ಮಿನಾರ್ ಉತ್ಖನನದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ: ಕೇಂದ್ರ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಮಾಡುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಭಾನುವಾರ ಹೇಳಿದ್ದಾರೆ.

ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಕೇಂದ್ರ ಸಂಸ್ಕೃತಿ ಸಚಿವಾಲಯ ಆದೇಶಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡಿದ್ದವು. 

ಈ ಕುರಿತು ಪ್ರತಿಕ್ರಿಯಿಸಿರುವ ಜಿ.ಕೆ.ರೆಡ್ಡಿ, ‘ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ ಉತ್ಖನನ ಮಾಡುವ ಬಗ್ಗೆ  ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ. 

ಖುತುಬ್‌ ಮಿನಾರ್‌ ಹೆಸರನ್ನು ಬದಲಿಸಿ, ಇದಕ್ಕೆ ವಿಷ್ಣು ಸ್ತಂಭವೆಂದು ಕರೆಯಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಮಿನಾರ್‌ ಆವರಣದಲ್ಲಿ ವಿವಿಧೆಡೆ ಇರುವ ದೇವತೆಗಳ ಮೂರ್ತಿಗಳನ್ನು ಒಂದೆಡೆ ಇರಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದೂ ಆಗ್ರಹಿಸಿವೆ.

‘ಈಗ ಖುತುಬ್‌ ಮಿನಾರ್‌ ಎಂದು ಕರೆಯುತ್ತಿರುವ ವಿಷ್ಣು ಸ್ತಂಭವನ್ನು ರಾಜ ವಿಕ್ರಮಾದಿತ್ಯ ನಿರ್ಮಿಸಿದ್ದರು. ಆದರೆ, ಇದನ್ನು ತಾನೇ ನಿರ್ಮಿಸಿದ್ದಾಗಿ ಕುತುಬುದ್ದೀನ್‌ ಐಬಕ್‌ ಘೋಷಿಸಿಕೊಂಡ. ಮಿನಾರ್‌ ಆವರಣದಲ್ಲಿ 27 ದೇವಸ್ಥಾನಗಳಿದ್ದವು. ಅವು ಐಬಾಕ್‌ ದಾಳಿಯಿಂದ ನಾಶಗೊಂಡವು. ಮಿನಾರ್‌ ಆವರಣದಲ್ಲಿ ಇಂದಿಗೂ ಹಿಂದೂ ದೇವತೆಗಳ ಮೂರ್ತಿಗಳನ್ನು ಕಾಣಬಹುದು. ಹೀಗಾಗಿ ಖುತುಬ್‌ ಮಿನಾರ್‌ ಅನ್ನು ವಿಷ್ಣು ಸ್ತಂಭವೆಂದು ಘೋಷಣೆ ಮಾಡಬೇಕೆಂಬುದು ನಮ್ಮ ಆಗ್ರಹ’ ಎಂದು ಯುನೈಟೆಡ್‌ ಹಿಂದೂ ಫ್ರಂಟ್‌ನ ಅಂತರರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಭಗವಾನ್‌ ಗೋಯಲ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು