ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಯಿಂದ ತ್ವರಿತ ಸರಕು ಸಾಗಣೆ ನೀತಿ ಆರಂಭ

Last Updated 23 ಡಿಸೆಂಬರ್ 2020, 15:48 IST
ಅಕ್ಷರ ಗಾತ್ರ

ನವದೆಹಲಿ: ಸರಕುಗಳನ್ನು ತ್ವರಿತಗತಿಯಲ್ಲಿ ನಿಗದಿತ ಸ್ಥಳಕ್ಕೆ ತಲುಪಿಸಲು ‘ತ್ವರಿತಸರಕುಸಾಗಣೆನೀತಿ’ಯನ್ನು ರೈಲ್ವೆ ಪರಿಚಯಿಸಿದೆ.

ಈ ನೀತಿಯ ಅನುಸಾರ, ಗ್ರಾಹಕರು ಸರಕುಗಳನ್ನು ತ್ವರಿತವಾಗಿ ಸಾಗಿಸಲು ವಿನಂತಿಸಿದರೆ ಸೋಮವಾರ ಮತ್ತು ಶುಕ್ರವಾರದಂದು ಸರಕುಗಳ ಸಾಗಣೆಕೆಗೆ ಆದ್ಯತೆ ನೀಡಲಾಗುತ್ತದೆ. ಎರಡೇದಿನದಲ್ಲಿಸರಕುತಲುಪಿಸಿದರೆ ಹೆಚ್ಚುಶುಲ್ಕ ತೆಗೆದುಕೊಳ್ಳಲಾಗುತ್ತದೆ. ಸಮಯ ತೆಗೆದುಕೊಂಡರೆ ಮಾಮೂಲಿ ಶುಲ್ಕ ತೆಗೆದುಕೊಳ್ಳಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.

ತ್ವರಿತ ಗತಿಯಲ್ಲಿ ಸರಕು ಸಾಗಣೆ ಮಾಡಬೇಕು ಎಂಬುವರು ಸಾಮಾನ್ಯ ದರಕ್ಕಿಂತ ಶೇ 5ರಷ್ಟು ಹೆಚ್ಚು ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿಸಿದವರ ಸರಕುಗಳನ್ನು ಎರಡೇ ದಿನದಲ್ಲಿ ಸಾಗಿಸಲಾಗುತ್ತದೆ. ಎರಡು ದಿನದ ನಂತರ ಸರಕು ಸಾಗಣೆ ಮಾಡಿದರೆ, ಮೊದಲು ಪಡೆದಿದ್ದ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ. ಕೆಲ ನಿರ್ಬಂಧಿತ ತಾಣಗಳಿಗೆ ಈ ನೀತಿ ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದೆ.

ಒಮ್ಮೆ ಪ್ರೀಮಿಯಂ ಇಂಡೆಂಟ್ ಪಾವತಿಸಿದರೆ ಅದನ್ನು ಹಿಂಪಡೆಯುವಂತಿಲ್ಲ. ಹಿಂಪಡೆದರೆ ಪಾವತಿಸಿದ ಮೊತ್ತ ವಾಪಸ್ ದೊರೆಯದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT