ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಚಾಟ್‌ ಮೂಲಕ ಆಹಾರ ಖರೀದಿಸುವ ವ್ಯವಸ್ಥೆ ಪರಿಚಯಿಸಿದ ರೈಲ್ವೆ

Last Updated 6 ಫೆಬ್ರುವರಿ 2023, 14:26 IST
ಅಕ್ಷರ ಗಾತ್ರ

ನವದೆಹಲಿ: ರೈಲು ಪ್ರಯಾಣಿಕರು ಇನ್ನುಮುಂದೆ ವಾಟ್ಸ್‌ಆ್ಯಪ್‌ ಚಾಟ್‌ ಮೂಲಕವೇ ಆಹಾರ ಖರೀದಿಸುವಂಥ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಆಹಾರ ಸರಬರಾಜು ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಇ) ಸೋಮವಾರ ಪರಿಚಯಿಸಿದೆ.

ಐಆರ್‌ಸಿಟಿಸಿ ಈಗಾಗಲೇ ಇ–ಕೇಟರಿಂಗ್‌ ಸೌಲಭ್ಯವನ್ನು ಗ್ರಾಹಕರಿಗೆ ನೀಡಿದೆ. ವೆಬ್‌ಸೈಟ್‌ ಅಥವಾ ಇ–ಕೇಟರಿಂಗ್‌ ಫುಡ್‌ ಆ್ಯಪ್‌ ಮೂಲಕ ಗ್ರಾಹಕರು ಆಹಾರ ಖರೀದಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇ–ಕೇಟರಿಂಗ್‌ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಮಾಡುವ ಸಲುವಾಗಿ +91–8750001323 ವಾಟ್ಸ್‌ಆ್ಯಪ್‌ ಸಂಖ್ಯೆಯನ್ನು ರೈಲ್ವೆ ಇಲಾಖೆ ನೀಡಿದೆ.

ಎರಡು ಹಂತಗಳಲ್ಲಿ ಈ ಸೇವೆಯನ್ನು ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ, ಇ–ಟಿಕೆಟ್‌ ಕಾಯ್ದಿರಿಸುವ ಗ್ರಾಹಕರಿಗೆ www.ecatering.irctc.co.in. ಎಂಬ ಲಿಂಕ್‌ ಕಳಿಸಲಾಗುವುದು. ಅವರು ಈ ಲಿಂಕ್‌ ಬಳಿಸಿ ತಮ್ಮಿಷ್ಟದ ಆಹಾರ ಆರ್ಡರ್‌ ಮಾಡಬಹುದು. ಎರಡನೇ ಹಂತದಲ್ಲಿ ಗ್ರಾಹಕರಿಗೆ ವಾಟ್ಸ್‌ಆ್ಯಪ್‌ ಸಂಖ್ಯೆ ದೊರಕುವಂತೆ ಮಾಡಲಾಗುವುದು. ಈ ಸಂಖ್ಯೆ ಬಳಸಿ ಗ್ರಾಹಕರು ತಮ್ಮ ಅಗತ್ಯಗಳ ಕುರಿತು ಸಂದೇಶ ರವಾನಿಸಬಹುದು. ಕೃತಕ ಬುದ್ಧಿಮತ್ತೆ (ಎಐ) ನಿಯಂತ್ರಿತ ವ್ಯವಸ್ಥೆಯು ಗ್ರಾಹಕರ ಜೊತೆ ಚಾಟ್‌ ಮಾಡಿ ಅವರ ಆದೇಶಗಳನ್ನು ಸ್ವೀಕರಿಸಲಿದೆ.

ಸದ್ಯ ಆಯ್ದ ರೈಲುಗಳಲ್ಲಿ ಮಾತ್ರ ಈ ಸೌಲಭ್ಯ ನೀಡಲಾಗುವುದು. ಪ್ರಯಾಣಿಕರ ಅಭಿಪ್ರಾಯದ ಆಧರಿಸಿ ಇತರ ರೈಲುಗಳಿಗೂ ಈ ಸೇವೆ ವಿಸ್ತರಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಐಆರ್‌ಸಿಟಿಸಿಯ ಇ–ಕೇಟರಿಂಗ್‌ ಸೇವೆ ಮೂಲಕ ಪ್ರತಿದಿನ ಸುಮಾರು 50,000 ಊಟವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT