ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಣವಿಲ್ಲದೇ ರೈಲಿನ ಸರಪಳಿ ಎಳೆದರೆ ಆಗುವ ತೊಂದರೆಗಳಿವು: ಇಲ್ಲಿದೆ ರೈಲ್ವೆ ವಿಡಿಯೊ

ಅಕ್ಷರ ಗಾತ್ರ

ನವದೆಹಲಿ: ಪ್ರಯಾಣಿಕರೊಬ್ಬರು ರೈಲಿನ ಅಲಾರಾಂ ಚೈನ್ ಎಳೆದಿದ್ದರಿಂದ ನದಿಯೊಂದರ ಸೇತುವೆಯ ಮೇಲೆ ನಿಂತ ರೈಲನ್ನು ಸಹಾಯಕ ಲೋಕೊಪೈಲಟ್‌ ಜೀವದ ಹಂಗು ತೊರೆದು ಮರುಚಾಲು ಮಾಡುತ್ತಿರುವ ವಿಡಿಯೊವನ್ನು ರೈಲ್ವೆ ಸಚಿವಾಲಯ ಶನಿವಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಕೇಂದ್ರ ರೈಲ್ವೇಯ ಸಹಾಯಕ ಲೋಕೊಪೈಲಟ್ ಸತೀಶ್ ಕುಮಾರ್ ಅವರು ‘ಗೋದಾನ್ ಎಕ್ಸ್‌ಪ್ರೆಸ್‌’ನ ಎಂಜಿನ್‌ನ ಕೆಳಗೆ ಹೋಗಿ ಅಲಾರಾಂ ಸರಪಳಿಯನ್ನು ಮರುಹೊಂದಿಸುತ್ತಿರುವುದು ವಿಡಿಯೊದಲ್ಲಿದೆ.

‘ಅನಿವಾರ್ಯ ಕಾರಣವಿಲ್ಲದೆ ಸರಪಳಿಯನ್ನು ಎಳೆಯುವುದರಿಂದ ಹಲವರಿಗೆ ತೊಂದರೆಯಾಗುತ್ತದೆ’ ಎಂದು ರೈಲ್ವೆ ಹೇಳಿದೆ.

ತುರ್ತು ಸಂದರ್ಭದಲ್ಲಿ ಮಾತ್ರ ಸರಪಳಿ ಎಳೆಯುವಂತೆ ರೈಲ್ವೆ ಮನವಿ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT