ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ ರಹಿತ ಪ್ರಯಾಣಿಕರಿಗೆ ದಂಡ: ರೈಲ್ವೆಗೆ ₹561 ಕೋಟಿ ಆದಾಯ

Last Updated 23 ಆಗಸ್ಟ್ 2020, 12:48 IST
ಅಕ್ಷರ ಗಾತ್ರ

ನವದೆಹಲಿ:2019-20ರಲ್ಲಿಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರಿಗೆ ವಿಧಿಸಿದ ದಂಡದಿಂದಲೇ ರೈಲ್ವೆ ₹561 ಆದಾಯ ಗಳಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಆದಾಯ ಶೇ 38ರಷ್ಟು ಏರಿಕೆಯಾಗಿದೆ.

ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರ ಶೇಖರ್ ಗೌರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ಈ ವಿವರಗಳು ಲಭ್ಯವಾಗಿವೆ.

2019–20ರಲ್ಲಿ 1.10 ಕೋಟಿ ಟಿಕೆಟ್‌ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. 2016–20ರ ಅವಧಿಯಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರಿಂದಲೇ ₹1,938 ಕೋಟಿ ಸಂಗ್ರಹವಾಗಿದೆ.

ಟಿಕೆಟ್ ಇಲ್ಲದೆ ಪ್ರಯಾಣಿಸುವವರು ಟಿಕೆಟ್ ವೆಚ್ಚದ ಜೊತೆಗೆ ಕನಿಷ್ಠ ₹ 250 ದಂಡ ಕಟ್ಟುವುದು ಕಡ್ಡಾಯವಾಗಿದೆ. ಈ ದಂಡ ಪಾವತಿಗೆ ನಿರಾಕರಿಸಿದರೆ, ವ್ಯಕ್ತಿಯನ್ನುರೈಲ್ವೆ ರಕ್ಷಣಾ ಪಡೆಗೆ (ಆರ್‌ಪಿಎಫ್) ಹಸ್ತಾಂತರಿಸಲಾಗುವುದು. ಅಲ್ಲದೆ ರೈಲ್ವೆ ಕಾಯ್ದೆಯ ಸೆಕ್ಷನ್ 137 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ವರ್ಷ ದಂಡದಿಂದ ಗಳಿಸಿದ ಆದಾಯ

2016–17 – ₹405.30

2017–18 – ₹441.62

2019–19 – ₹530.06

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT