ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19: ರೈಲ್ವೆಯಿಂದ 100 ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ಕಾರ್ಯಾಚರಣೆ

Last Updated 12 ಮೇ 2021, 14:12 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಸಾಗಣೆ ಮಾಡುವ ಸಲುವಾಗಿ ಭಾರತೀಯ ರೈಲ್ವೆಯು ಬುಧವಾರದವರೆಗೆ 100 ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲುಗಳ ಕಾರ್ಯಾಚರಣೆ ನಡೆಸಿದೆ.

ಏ. 19ರಂದು ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲುಗಳ ಸಂಚಾರ ಆರಂಭಗೊಂಡಿತು. ಈ ವರೆಗೆ ವಿವಿಧ ರಾಜ್ಯಗಳಿಗೆ 396 ಟ್ಯಾಂಕರ್‌ಗಳ ಮೂಲಕ 6,260 ಟನ್‌ ದ್ರವೀಕೃತ ವೈದ್ಯಕೀಯ ಆಮ್ಲಜನಕ ತಲುಪಿಸಲಾಗಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ.

ಏ. 19ರಂದು ಕಾರ್ಯಾಚರಣೆ ಆರಂಭಗೊಂಡಾಗ, ಮೊದಲ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲು ಜಾರ್ಖಂಡ್‌ನ ಟಾಟಾನಗರದಿಂದ ಉತ್ತರಾಖಂಡಕ್ಕೆ 120 ಟನ್‌ ಆಮ್ಲಜನಕ ಸಾಗಿಸಿತು. ಅದೇ ದಿನ ಮತ್ತೊಂದು ರೈಲು ಒಡಿಶಾದ ಅಂಗೂಲ್‌ನಿಂದ ಪುಣೆಗೆ 50 ಟನ್‌ ಆಮ್ಲಜನಕ ಹೊತ್ತೊಯ್ದಿತು ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT