ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗವಾಗಿ ಸರಕು ಸಾಗಣೆ: ವಂದೇ ಭಾರತ್‌ ರೈಲು ಸೇವೆಗೆ ಸಿದ್ಧತೆ

Last Updated 13 ಅಕ್ಟೋಬರ್ 2022, 14:55 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವೇಗವಾಗಿ ಸರಕು ಸಾಗಣೆ ಮಾಡುವ ಸಲುವಾಗಿ ವಂದೇ ಭಾರತ್‌ ಸೆಮಿ ಹೈ ಸ್ಪೀಡ್‌ ರೈಲು ಸೇವೆ ಪರಿಚಯಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

‘ನವದೆಹಲಿ–ಎನ್‌ಸಿಆರ್‌ ಮತ್ತು ಮುಂಬೈ ಪ್ರದೇಶಗಳಲ್ಲಿ ಮೊದಲು ಈ ರೈಲು ಸೇವೆ ಆರಂಭವಾಗಲಿದೆ’ ಎಂದು ಇಲಾಖೆ ತಿಳಿಸಿದೆ.

‘ಈ ರೈಲುಗಳು ಹೆಚ್ಚಿನ ಮೌಲ್ಯದ ಮತ್ತು ಅತಿ ಸೂಕ್ಷ್ಮವಾದ ಸರಕುಗಳನ್ನು ಅತಿವೇಗವಾಗಿ ಸಾಗಿಸಲಿವೆ. ಪ್ಯಾಲೆಟೈಸಡ್‌ ಕಂಟೇನರ್‌ಗಳ ಸಾಗಣೆಯನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳನ್ನು ವಿನ್ಯಾಸಗೊಳಿಸಲಾಗಿದ್ದು, ಇವು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿವೆ. ಸ್ವಯಂ ಚಾಲಿತ ಬಾಗಿಲುಗಳನ್ನೂ ಒಳಗೊಂಡಿರಲಿವೆ. ಇವು ಒಟ್ಟು 264 ಟನ್‌ ಸರಕು ಸಾಗಿಸುವ ಸಾಮರ್ಥ್ಯ ಹೊಂದಿರಲಿವೆ’ ಎಂದು ರೈಲ್ವೆ ಮಂಡಳಿಯು ಎಲ್ಲಾ ವಲಯಗಳ ಪ್ರಧಾನ ವ್ಯವಸ್ಥಾಪಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT