ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನ. 1 ರಿಂದ ಗುಜ್ಜಾರ್ ಸಮುದಾಯದ ಆಂದೋಲನ

Last Updated 31 ಅಕ್ಟೋಬರ್ 2020, 3:54 IST
ಅಕ್ಷರ ಗಾತ್ರ

ಜೈಪುರ: ಗುಜ್ಜಾರ್ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ನವೆಂಬರ್ 1 ರಿಂದ ಆಂದೋಲನವನ್ನು ಪ್ರಾರಂಭಿಸುವುದಾಗಿ ಪ್ರಮುಖ ಗುರ್ಜಾರ್ ಸಂಸ್ಥೆ ಶುಕ್ರವಾರ ತಿಳಿಸಿದೆ.

ಆಂದೋಲನದ ಅಂಗವಾಗಿ ಕರೌಲಿ, ಭರತ್‌ಪುರ, ಜೈಪುರ ಮತ್ತು ಸವಾಯಿ ಮಾಧೋಪುರಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗುಜ್ಜಾರ್ ನಾಯಕ ಕರ್ನಲ್ ಕಿರೋರಿ ಸಿಂಗ್ ಬೈನ್‌ಸ್ಲಾ, ಭಾನುವಾರ ನಡೆಯಲಿರುವ ಆಂದೋಲನಕ್ಕಾಗಿ ಸಮುದಾಯದ ಸದಸ್ಯರು ಪಿಲುಪುರ (ಬಯಾನ) ತಲುಪಬೇಕೆಂದು ಒತ್ತಾಯಿಸಿದ್ದಾರೆ.

ಗುಜ್ಜಾರ್ ಆರಕ್ಷಣ ಸಂಘರ್ಷ ಸಮಿತಿ ನಾಯಕ ವಿಜಯ್ ಬೈನ್‌ಸ್ಲಾ ಮಾತನಾಡಿ, 'ನವೆಂಬರ್ 1 ರಿಂದ ಪಿಲುಪುರದಲ್ಲಿ ಚಳುವಳಿ ಪ್ರಾರಂಭವಾಗಲಿದೆ ಏಕೆಂದರೆ ಕಳೆದ ಎರಡು ವರ್ಷಗಳಿಂದ ಸರ್ಕಾರ ನಮ್ಮ ಬೇಡಿಕೆಗಳನ್ನು ಸ್ವೀಕರಿಸುತ್ತಿಲ್ಲ. ರಾಜ್ಯ ಸರ್ಕಾರವು ನಮ್ಮ ಬೇಡಿಕೆಗಳನ್ನು ಕಡೆಗಣಿಸಿದ್ದರಿಂದಾಗಿ ಸಮುದಾಯಕ್ಕೆ ಬೇರೆ ದಾರಿಯಿಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಹೇಳಿದರು.

ರಾಜಸ್ಥಾನ ಸರ್ಕಾರವು ಸಂವಿಧಾನದ ಒಂಬತ್ತನೇ ವಿಧಿಯಲ್ಲಿ ಗುಜ್ಜಾರ್ ಮೀಸಲಾತಿಯನ್ನು ಒಳಗೊಳ್ಳುವಂತೆ ಮಾಡಬೇಕು, ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು ಮತ್ತು ಬಾಕಿ ಇರುವ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ ಐದರಷ್ಟು ಮೀಸಲಾತಿಯ ಲಾಭವನ್ನು ಅತ್ಯಂತ ಹಿಂದುಳಿದ ವರ್ಗಗಳಿಗೆ (ಎಂಬಿಸಿ) ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪೊಲೀಸರು ಮತ್ತು ಸ್ಥಳೀಯ ಆಡಳಿತವು ಕರೌಲಿ, ಅಲ್ವಾರ್, ದೌಸಾ, ಬುಂಡಿ, ಸವಾಯಿ ಮಾಧೋಪುರ ಮತ್ತು ಭರತ್‌ಪುರ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಹೆಚ್ಚಿಸಿದೆ.

ಕರೌಲಿ, ಭರತ್‌ಪುರ, ಜೈಪುರ ಮತ್ತು ಸವಾಯಿ ಮಾಧೋಪುರಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ತುರ್ತು ಕಾರ್ಯಪಡೆ ಮತ್ತು ಗಡಿ ಸಶಸ್ತ್ರ ಹೋಮ್ ಗಾರ್ಡ್ ಸೇರಿದಂತೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಎಚ್ಚರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೌರಭ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಗುಜ್ಜಾರ್ ಸಮಿತಿಯು ಅಕ್ಟೋಬರ್ 17 ರಂದು ಬಯಾನದಲ್ಲಿ ಮಹಾಪಂಚಾಯತ್ ನಡೆಸಿದ್ದು, ನವೆಂಬರ್ 1 ರವರೆಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರಕ್ಕೆ ಕೊನೆಯ ಕಾಲಾವಧಿ ನೀಡಿತ್ತು.
ಸಮುದಾಯದ ಮೂರು ಪ್ರಮುಖ ಬೇಡಿಕೆಗಳ ಬಗ್ಗೆ ಕ್ಯಾಬಿನೆಟ್ ಸಮಿತಿಯು ನಿರ್ಧಾರ ತೆಗೆದುಕೊಂಡಿದೆ. ಪರೀಕ್ಷಾ ಅವಧಿಯನ್ನು ಪೂರ್ಣಗೊಳಿಸಿದ ಅತ್ಯಂತ ಹಿಂದುಳಿದ ವರ್ಗದ (ಎಂಬಿಸಿ) ಎಲ್ಲ 1,252 ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ನಿಯಮಿತವಾಗಿ ವೇತನ ಪ್ರಮಾಣವನ್ನು ನೀಡಲಿದೆ ಎಂದು ರಾಜಸ್ಥಾನದ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ಅಶೋಕ್ ಚಾಂದ್ನಾ ಗುರುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT