ಶುಕ್ರವಾರ, ಡಿಸೆಂಬರ್ 4, 2020
25 °C

ಪಾಕ್‌ ಸಚಿವರ ಹೇಳಿಕೆಗೆ ರಾಹುಲ್‌ ಪ್ರತಿಕ್ರಿಯಿಸಲಿ: ರಾಜನಾಥ್ ಸಿಂಗ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪಟ್ನಾ: ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ ಕುರಿತಂತೆ  ಪಾಕ್‌ ಸಚಿವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಮೌನವಾಗಿರುವುದು ಏಕೆ ಎಂದು ರಕ್ಷಣ ಸಚಿವ ರಾಜನಾಥ್ ಸಿಂಗ್‌ ಪ್ರಶ್ನೆ ಮಾಡಿದ್ದಾರೆ.

ಇಲ್ಲಿನ ಮುಜಾಫರ್‌ನಗರದಲ್ಲಿ ಚುನಾವಣೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ ಕುರಿತಂತೆ  ಪಾಕ್‌ ಸಚಿವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ  ಮೌನವಾಗಿರುವುದು ಏಕೆ ಕೇಳಿದ್ದಾರೆ.

ಸರ್ಜಿಕಲ್‌ ದಾಳಿ ಮೂಲಕ ಭಾರತ ತಕ್ಕ ಉತ್ತರ ಕೊಟ್ಟಿರುವುದು ಮೋದಿ ಸಾಮರ್ಥ್ಯವಾಗಿದೆ. ಮೊದಲು ನೀವು ಪಾಕ್‌ ಸಚಿವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಎಂದು ರಾಜನಾಥ್‌ ಸಿಂಗ್‌ ಅವರು ಹೇಳಿದರು.

ಲಾಲು ಪ್ರಸಾದ್‌ ಆಡಳಿತದಲ್ಲಿ ಬಿಹಾರ ಜಂಗಲ್‌ ರಾಜ್ಯವಾಗಿತ್ತು. ಎನ್‌ಡಿಎ ಬಂದ ಮೇಲೆ ಅಭಿವೃದ್ಧಿಯಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು