ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿ ಶೇ 74 ಕ್ಕೆ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ

Last Updated 18 ಮಾರ್ಚ್ 2021, 16:01 IST
ಅಕ್ಷರ ಗಾತ್ರ

ರಾಜ್ಯಸಭೆ: ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಈಗಿರುವ ಶೇ. 49 ರಿಂದ ಶೇ 74 ಕ್ಕೆ ಹೆಚ್ಚಿಸುವ ಮಸೂದೆಯನ್ನು ರಾಜ್ಯಸಭೆ ಗುರುವಾರ ಅಂಗೀಕರಿಸಿದೆ.

ವಿಮಾ (ತಿದ್ದುಪಡಿ) ಮಸೂದೆ 2021 ರ ಚರ್ಚೆಗೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ವಿಮಾ ಕ್ಷೇತ್ರದಲ್ಲಿ ಮತ್ತಷ್ಟು ಹೂಡಿಕೆಯಿಂದ ದೇಶೀಯ ದೀರ್ಘಕಾಲೀನ ಸಂಪನ್ಮೂಲಗಳಿಗೆ ಪೂರಕವಾಗಲಿದೆ ಎಂದು ಹೇಳಿದರು.

ಧ್ವನಿಮತದ ಮೂಲಕ ಮಸೂದೆ ಅಂಗೀಕರಿಸಲಾಗಿದೆ.

ವಿಮಾ ವಲಯಕ್ಕೆ ಸಂಬಂಧಿಸಿದ ಹೂಡಿಕೆದಾರರ ಜೊತೆ ವಲಯ ನಿಯಂತ್ರಕ ಐಆರ್‌ಡಿಎಐ ವಿವರವಾದ ಸಮಾಲೋಚನೆ ನಡೆಸಿದ ನಂತರ ಎಫ್‌ಡಿಐ ಮಿತಿಯನ್ನು ಶೇಕಡಾ 74 ಕ್ಕೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೀತಾರಾಮನ್ ಹೇಳಿದರು.

ಮಸೂದೆಯ ಪ್ರಕಾರ, ಮಂಡಳಿಯ ಬಹುಪಾಲು ನಿರ್ದೇಶಕರು ಮತ್ತು ಪ್ರಮುಖ ನಿರ್ವಹಣಾ ವ್ಯಕ್ತಿಗಳು ಭಾರತೀಯ ನಿವಾಸಿಗಳಾಗಿರಾತ್ತಾರೆ, ಕನಿಷ್ಠ 50 ಪ್ರತಿಶತ ನಿರ್ದೇಶಕರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಿರ್ದಿಷ್ಟ ಶೇಕಡಾವಾರು ಲಾಭವನ್ನು ಸಾಮಾನ್ಯ ಮೀಸಲು ರೂಪದಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆ 2015 ರಲ್ಲಿ ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ ಮಿತಿಯನ್ನು ಸರ್ಕಾರ ಶೇ. 26 ರಿಂದ 49 ಕ್ಕೆ ಏರಿಸಿತ್ತು.

ಎಫ್‌ಡಿಐ ಮಿತಿ ಹೆಚ್ಚಳವು ದೇಶದಲ್ಲಿ ಜೀವ ವಿಮಾ ಹೆಚ್ಚಳದ ಗುರಿಯನ್ನು ಹೊಂದಿದೆ. ಜಿಡಿಪಿಯ ಶೇಕಡಾವಾರು ಜೀವ ವಿಮಾ ಪ್ರೀಮಿಯಂ ದೇಶದಲ್ಲಿ ಶೇಕಡಾ 3.6 ರಷ್ಟಿದೆ, ಇದು ಜಾಗತಿಕ ಸರಾಸರಿ ಶೇಕಡಾ 7.13 ಕ್ಕಿಂತಲೂ ಕಡಿಮೆಯಾಗಿದೆ. ಸಾಮಾನ್ಯ ವಿಮೆಯ ವಿಷಯದಲ್ಲಿ, ಇದು ಜಿಡಿಪಿಯ ಶೇಕಡಾ 0.94 ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT