ಭಾನುವಾರ, ಮೇ 29, 2022
30 °C

ನಿವೃತ್ತ ನ್ಯಾಯಮೂರ್ತಿಗಳ ಪಿಂಚಣಿ ಏರಿಕೆಗೆ ಮಸೂದೆ: ರಾಜ್ಯಸಭೆಯಲ್ಲಿ ಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೈಕೋರ್ಟ್‌ ಮತ್ತು ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಪಿಂಚಣಿ ಏರಿಕೆಗೆ ಸಂಬಂಧಿಸಿದಂತೆ ಮಸೂದೆಯನ್ನು ಸರ್ಕಾರ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿತು.

ಪಿಂಚಣಿ ಭಾಗಶಃ ಏರಿಕೆಗೆ ಅರ್ಹತಾ ದಿನಾಂಕ ಕುರಿತಂತೆ ಸ್ಪಷ್ಟತೆ ನೀಡುವ ಸಲುವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ಸಂಬಳ ಮತ್ತು ಸೇವಾ ಕಾಯ್ದೆಗೆ ತಿದ್ದುಪಡಿ ತರುವುದು ಇದರ ಉದ್ದೇಶ.

ಕಾನೂನು ಸಚಿವ ಕಿರಣ್‌ ರಿಜಿಜು ಅವರು ಮಸೂದೆ ಮಂಡಿಸಿದರು. ಲೋಕಸಭೆಯಲ್ಲಿ ಡಿಸೆಂಬರ್‌ 8ರಂದು ಮಸೂದೆಗೆ ಅಂಗೀಕಾರ ದೊರೆತಿದೆ. ‘ಇದೊಂದು ಸಣ್ಣ ತಿದ್ದುಪಡಿ. ನಿವೃತ್ತ ನ್ಯಾಯಮೂರ್ತಿಗಳ ಪಿಂಚಣಿಯಲ್ಲಿ ಭಾಗಶಃ ಏರಿಕೆ ಮಾಡುವುದು ಇದರ ಉದ್ದೇಶ’ ಎಂದು ಸಚಿವರು ಮಸೂದೆ ಮಂಡನೆಯ ವೇಳೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು