ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ 251 ರಾಖಿಗಳನ್ನು ಕಳುಹಿಸಿದ ವೃಂದಾವನದ ವಿಧವೆಯರು

Last Updated 20 ಆಗಸ್ಟ್ 2021, 17:27 IST
ಅಕ್ಷರ ಗಾತ್ರ

ಲಖನೌ: ರಕ್ಷಾಬಂಧನ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ದೇಗುಲ ನಗರ ವೃಂದಾವನದ ವಿಧವೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೈಯಲ್ಲೇ ತಯಾರಿಸಿದ 251 ರಾಖಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಕಾರಣ ಈ ಬಾರಿ ವಿಧವೆಯರಿಗೆ ನೇರವಾಗಿ ಪ್ರಧಾನಿಯವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಖಿಗಳನ್ನು ಕಳುಹಿಸಿಕೊಡಲಾಗಿದೆ ಎಂದು ವಿಧವೆಯರಿಗೆ ನೆರವಾಗುತ್ತಿರುವ ಎನ್‌ಜಿಒ ‘ಸುಲಭ್ ಹೋಪ್ ಫೌಂಡೇಷನ್’ ತಿಳಿಸಿದೆ.

ರಾಖಿಗಳು ಪ್ರಧಾನಿ ನರೇಂದ್ರ ಮೋದಿಯವರ ವರ್ಣಮಯ ಚಿತ್ರಗಳು, ಕೋವಿಡ್ ಸಾಂಕ್ರಾಮಿಕದ ವಿರುದ್ಧ ಎಚ್ಚರಿಕೆಯ ಸಂದೇಶಗಳು, ಆತ್ಮನಿರ್ಭರ ಭಾರತ ಅಭಿಯಾನದ ಸಂದೇಶಗಳನ್ನು ಒಳಗೊಂಡಿವೆ ಎಂದು ಎನ್‌ಜಿಒ ತಿಳಿಸಿದೆ.

ಕೆಲವು ವಿಧವೆಯರು ಹತ್ತಿ ಬಟ್ಟೆಯ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ಭಾನುವಾರ ಪ್ರಧಾನಿಯವರಿಗೆ ನೀಡಲಾಗುತ್ತದೆ ಎಂದು ಎನ್‌ಜಿಒ ಹೇಳಿದೆ.

ನಾವು ತಯಾರಿಸಿರುವ ರಾಖಿಗಳು ಮತ್ತು ಮಾಸ್ಕ್‌ಗಳು ಪ್ರಧಾನಿಯವರಿಗೆ ತಲುಪುತ್ತಿರುವುದು ಸಂತಸ ತಂದಿದೆ ಎಂದು ಉಷಾ ದಾಸಿ ಎಂಬವರು ತಿಳಿಸಿದ್ದಾರೆ. ಇವರು ಈ ಹಿಂದೆ ಮೋದಿಯವರಿಗೆ ರಾಖಿ ಕಟ್ಟಿದ್ದರು.

‘ಸುರಕ್ಷಿತವಾಗಿರಿ, ಆತ್ಮನಿರ್ಭರ್’ ಎಂಬ ಸಂದೇಶಗಳು ಮತ್ತು ಮೋದಿ ಅವರ ಚಿತ್ರವುಳ್ಳ ಮಾಸ್ಕ್‌ ಅನ್ನು ತಯಾರಿಸಿರುವುದಾಗಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT