ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಸಂಕೀರ್ಣ ವಿಸ್ತರಣೆ: 1.15 ಲಕ್ಷ ಚದರ ಅಡಿ ಜಾಗ ಖರೀದಿ

Last Updated 20 ಮಾರ್ಚ್ 2021, 8:34 IST
ಅಕ್ಷರ ಗಾತ್ರ

ಅಯೋಧ್ಯಾ: ರಾಮ ಮಂದಿರ ನಿರ್ಮಾಣವಾಗುವ ಸ್ಥಳದಿಂದ 2–3 ಕಿ.ಮೀ ದೂರದಲ್ಲಿ 1.15 ಲಕ್ಷ ಚದರ ಅಡಿಯಷ್ಟು ಭೂಮಿಯನ್ನುರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಖರೀದಿಸಿದೆ.

‘ರಾಮ ಮಂದಿರದ ಭದ್ರತಾ ವ್ಯವಸ್ಥೆ, ಭಕ್ತರು ಮತ್ತು ಟ್ರಸ್ಟ್‌ನ ಇತರ ಚಟುವಟಿಕೆಗಳಿಗೆ ಸೌಲಭ್ಯವನ್ನು ಅಭಿವೃದ್ದಿಪಡಿಸುವ ಉದ್ದೇಶದಿಂದ ಈ ಭೂಮಿಯನ್ನು ಖರೀದಿಸಲಾಗಿದೆ’ ಎಂದು ಟ್ರಸ್ಟ್‌ನ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

‘ಕಳೆದ ವಾರ ಬಸ್ತಿ ಜಿಲ್ಲೆಯ ನಿವಾಸಿ ಹರೀಶ್‌ ಕುಮಾರ್‌ ಪಾಠಕ್‌ ಅವರಿಂದ ರಾಮ್‌ ಕೋಟ್‌ ಮತ್ತು ತೆಹ್ರಿ ಬಜಾರ್‌ ಪ್ರದೇಶದಲ್ಲಿ ಎರಡು ಜಾಗಗಳನ್ನು ಖರೀದಿಸಲಾಯಿತು. ಪ್ರತಿ ಚದರ ಅಡಿಗೆ ₹ 690 ದರ ನಿಗದಿ ಮಾಡಿ, ಒಟ್ಟು ₹8 ಕೋಟಿ ಪಾವತಿಸಿ ಜಮೀನನ್ನು ಖರೀದಿಸಲಾಗಿದೆ’ ಎಂದು ಟ್ರಸ್ಟಿ ಅನಿಲ್ ಮಿಶ್ರಾ ಮಾಹಿತಿ ನೀಡಿದರು.

‘ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸಲುರಾಮಜನ್ಮಭೂಮಿ ಆವರಣದ ಪಕ್ಕದ ಸ್ವತ್ತುಗಳ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಅವುಗಳ ಮಾಲೀಕತ್ವವನ್ನು ಖಚಿತಪಡಿಸಿಕೊಳ್ಳಲು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT