ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ರಾಣಾಗಿದ್ದ ಹಿಮಾಲಯ ರಣಹದ್ದು ರಕ್ಷಣೆ, 15 ದಿನ ಕ್ವಾರಂಟೈನ್: ಏನಿದರ ವಿಶೇಷತೆ?

Last Updated 9 ಜನವರಿ 2023, 7:32 IST
ಅಕ್ಷರ ಗಾತ್ರ

ಕಾನ್ಪುರ: ಕಾನ್ಪುರದ ಬೆನಜಬರ್ ಸ್ಮಶಾನದ ಬಳಿ ಅಪರೂಪದ ಹಿಮಾಲಯನ್ ಗ್ರಿಫನ್ ರಣಹದ್ದು ಪತ್ತೆಯಾಗಿದ್ದು, ಅದನ್ನು ರಕ್ಷಿಸಲಾಗಿದೆ.

ಅಲೆನ್ ಫಾರೆಸ್ಟ್ ಮೃಗಾಲಯದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಅದನ್ನು 15 ದಿನ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ಶ್ರದ್ಧಾ ಯಾದವ್ ತಿಳಿಸಿದ್ದಾರೆ.

‘ಹಿಮಾಲಯನ್‌ ರಣಹದ್ದುಗಳ ಜೋಡಿ ಇಲ್ಲಿ ಕಾಣಿಸಿಕೊಂಡಿತ್ತು. ಒಂದು ಮಾತ್ರ ಸಿಕ್ಕಿದೆ. ಬೆನಜಬರ್ ಪ್ರದೇಶದಲ್ಲಿ ಇನ್ನೂ ಒಂದು ರಣಹದ್ದು ಇದೆ. ಅದಕ್ಕಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಯಾದವ್‌ ಹೇಳಿದರು.

‘ಈಗ ಸಿಕ್ಕಿರುವ ರಣಹದ್ದುವನ್ನು ಆಸ್ಪತ್ರೆಯ ಆವರಣದಲ್ಲಿ ಇತರೆ ಪಕ್ಷಿಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ’ ಎಂದು ಮೃಗಾಲಯದ ಪಶುವೈದ್ಯ ಡಾ.ನಾಸಿರ್ ಜೈದಿ ತಿಳಿಸಿದ್ದಾರೆ.

ಇದರ ತೂಕ ಸುಮಾರು 8 ಕೆ.ಜಿ. ಇದ್ದು, ವೈದ್ಯರ ತಂಡ ರಣಹದ್ದುವಿನ ಮೇಲೆ ನಿಗಾ ಇರಿಸಿದ್ದಾರೆ. ಈಗಾಗಲೇ ನಾಲ್ಕು ಹಿಮಾಲಯನ್ ಗ್ರಿಫನ್ ರಣಹದ್ದುಗಳು ಮೃಗಾಲಯದಲ್ಲಿವೆ ಎಂದು ಅವರು ಹೇಳಿದರು.

ಬೆನಜಬರ್ ಈದ್ಗಾ ಸ್ಮಶಾನದಲ್ಲಿ ಹಾರಲು ಸಾಧ್ಯವಾಗದೇ ನಿತ್ರಾಣವಾಗಿ ಬಿದ್ದಿದ್ದ ರಣಹದ್ದುವನ್ನು ಕೆಲ ಮಂದಿ ಗಮನಿಸಿ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ಹಿಮಾಲಯ ಮತ್ತು ಪಕ್ಕದ ಟಿಬೆಟಿಯನ್ ಪ್ರಸ್ಥಭೂಮಿಯು ಗ್ರಿಫನ್ ರಣಹದ್ದುಗಳ ಆವಾಸ ಸ್ಥಾನ ಎನಿಸಿಕೊಂಡಿದೆ.

ಇವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972 ರ ಅಡಿಯಲ್ಲಿ ರಕ್ಷಿಸಲಾಗಿದೆ.


ಗ್ರಿಫನ್‌ ರಣಹದ್ದುಗಳ ವಿಶೇಷತೆ

– ಹಿಮಾಲಯ ಮತ್ತು ಟಿಬೆಟ್‌ ಪ್ರಸ್ತಭೂಮಿಯಲ್ಲಿ ಇವು ಹೆಚ್ಚಾಗಿ ಕಾಣಸಿಗುತ್ತವೆ.

– ಸಂತಾನೋತ್ಪತ್ತಿ ಮತ್ತು ಹಲವು ಕಾರಣಗಳಿಗಾಗಿ ಇವು ವಿಶ್ವದ ಹಲವು ಭಾಗಗಳಿಗೆ ವಲಸೆ ಹೋಗುತ್ತವೆ.

– ಕರ್ನಾಟಕದ ಕಾರವಾರದಲ್ಲಿ ಇದರ ಆವಾಸ ಇರುವುದು ಪತ್ತೆಯಾಗಿದೆ.

– ಏಷ್ಯಾ ಭಾಗದಲ್ಲಿ ಕಾಣಸಿಗುವ ಎರಡು ಅತ್ಯಂತ ದೊಡ್ಡ ರಣಹದ್ದುಗಳಲ್ಲಿ ಹಿಮಾಲಯನ್‌ ಗ್ರಿಫನ್‌ ಕೂಡ ಒಂದು

– ಪ್ರಕೃತಿಯ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ಒಕ್ಕೂಟ (ಐಯುಸಿಎನ್‌ )ದ ಅಪಾಯದ ಪಟ್ಟಿಯಲ್ಲಿ ಈ ಜೀವಿಗಳೂ ಇವೆ.

– ಮಾಂಸ ಅಥವಾ ಪ್ರಾಣಿಗಳ ಮೃತದೇಹ ಮಾತ್ರವೇ ಇವುಗಳ ಆಹಾರ

– ಪಶುಗಳಿಗೆ ನೋವು ನಿವಾರಕವಾಗಿ ಬಳಸಲಾಗುವ ಡಿಕ್ಲೋಫೆನಾಕ್ ಎಂಬ ಔಷಧ ಈ ಜೀವಿಗಳಿಗೆ ವಿಷವಾಗಿ ಪರಿಣಮಿಸಿದೆ. ಜಾನುವಾರುಗಳ ಮೃತದೇಹಗಳಲ್ಲಿ ಡಿಕ್ಲೋಫೆನಾಕ್ ಅಂಶ ಹಾಗೆಯೇ ಉಳಿದಿಕೊಂಡಿರುತ್ತದೆ. ಮೃತ ಜಾನುವಾರುಗಳನ್ನು ತಿನ್ನುವ ಈ ರಣಹದ್ದುಗಳು ಅಪಾಯಕ್ಕೆ ಸಿಲುಕುತ್ತಿವೆ.

– ಹಿಮಾಲಯನ್‌ ಗ್ರಿಫನ್‌ ವಲ್ಚರ್‌ಗಳು 20–35 ವರೆಗೆ ಬದುಕುತ್ತವೆ ಎನ್ನಲಾಗಿದೆ.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT