ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಉತ್ತರಾಖಂಡದಲ್ಲಿ ಅಪರೂಪದ ಆರ್ಕಿಡ್ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌: ಉತ್ತರಾಖಂಡ ರಾಜ್ಯದ ಚಮೊಲಿ ಜಿಲ್ಲೆಯ ಮಂಡಲ್ ಪ್ರದೇಶದ ಬೆಟ್ಟದಲ್ಲಿ ಅಪರೂಪದ ಆರ್ಕಿಡ್‌ ಪತ್ತೆಯಾಗಿದೆ.

ಸೆಫ್ಲಾಂಥೆರಾ ಎರೆಕ್ಟಾ ವೆರೈಟಿಯ ಒಬ್ಲಾಂಸಿಒಲಟಾ ಹೆಸರಿನ ಈ ಆರ್ಕಿಡ್‌, 1870 ಮೀಟರ್‌ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಂಶೋಧನೆ) ಸಂಚೀವ್ ಚತುರ್ವೇದಿ ತಿಳಿಸಿದ್ದಾರೆ. ಭಾರತದ ಸಸ್ಯ ವರ್ಗದಲ್ಲಿ ಇದೊಂದು ಹೊಸ ದಾಖಲೆ ಎಂದು ಅವರು ತಿಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ಹೊಸ ತಳಿಯ ಆರ್ಕಿಡ್ ಪತ್ತೆಯಾದರೂ, ಭಾರತೀಯ ಸಸ್ಯ ಶಾಸ್ತ್ರೀಯ ಸಮೀಕ್ಷಾ ವಿಭಾಗದವರು ಶನಿವಾರ ಈ ವಿಷಯವನ್ನು ಖಚಿತಪಡಿಸಿದ್ದಾರೆ‘ ಎಂದು ಅವರು ತಿಳಿಸಿದ್ದಾರೆ. ಉತ್ತರಾಖಂಡದಲ್ಲಿ ಪತ್ತೆಯಾಗಿರುವ ಈ ತಳಿಯ ಮಾದರಿಯನ್ನು ಇದೇ ಮೊದಲ ಬಾರಿಗೆ ದಾಖಲಿಸಲಾಗಿದೆ‘ ಎಂದು ತಿಳಿಸಿದ್ದಾರೆ.

ಮಂಡಲ್‌ನಲ್ಲಿ ಹೂವು ಅರಳುವ ಸಮಯದಲ್ಲಿ ಹ್ಯೂಮಸ್‌ ಸಮೃದ್ಧವಾಗಿರುವ ಮಣ್ಣಿನಲ್ಲಿ ಈ ಆರ್ಕಿಡ್‌ಗಳು ಬೆಳೆಯುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು