ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ: 6–12 ವರ್ಷದ ಮಕ್ಕಳ ನೋಂದಣಿ

Last Updated 14 ಜೂನ್ 2021, 11:54 IST
ಅಕ್ಷರ ಗಾತ್ರ

ನವದೆಹಲಿ: ಕೋವ್ಯಾಕ್ಸಿನ್‌ ಲಸಿಕೆಯ ಪ್ರಯೋಗಕ್ಕಾಗಿ 6 ರಿಂದ 12 ವರ್ಷದ ಮಕ್ಕಳ ನೋಂದಣಿ ಪ್ರಕ್ರಿಯೆಯು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಮಂಗಳವಾರ ಆರಂಭವಾಗಲಿದೆ.

2 ರಿಂದ 6 ವರ್ಷದ ಮಕ್ಕಳ ಮೇಲಿನ ಪ್ರಯೋಗದ ನಂತರ ಈ ಪ್ರಕ್ರಿಯೆ ಶುರುವಾಗುತ್ತಿದೆ. 12 ರಿಂದ 18 ವರ್ಷದ ಮಕ್ಕಳ ನೋಂದಣಿ ಮುಗಿದಿದ್ದು, ಮೊದಲ ಡೋಸ್‌ ನೀಡಲಾಗಿದೆ ಎಂದು ಏಮ್ಸ್‌ ಹೇಳಿಕೆ ತಿಳಿಸಿದೆ.

ಭಾರತ ಔಷಧ ಮಹಾನಿಯಂತ್ರಕರು (ಡಿಸಿಜಿಐ) 2 ರಿಂದ 18 ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗಕ್ಕೆ ಮೇ 12ರಂದು ಅನುಮತಿ ನೀಡಿದ್ದರು ಎಂದು ಏಮ್ಸ್‌ನ ಡಾ.ಸಂಜಯ್‌ ರಾಯ್ ಅವರು ತಿಳಿಸಿದ್ದಾರೆ.

ಈ ವರ್ಷದ ಮಕ್ಕಳ ಮೇಲೆ ಲಸಿಕೆ ಪ್ರಯೋಗವು ಮೂರು ಹಂತದಲ್ಲಿ ನಡೆಯಲಿದೆ. 2–6, 6–12 ಮತ್ತು 12–18 ವರ್ಷ ವಯೋಮಾನದ ಗುಂಪುಗಳಲ್ಲಿ ತಲಾ 175 ಮಕ್ಕಳಿಗೆ, 28 ದಿನಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಮಕ್ಕಳಲ್ಲಿ ಇನ್ನೂ ಕೋವಿಡ್‌–19 ಪರಿಣಾಮ ಗಾಢವಾಗಿ ಕಾಣುತ್ತಿಲ್ಲ. ಆದರೆ, ಸೋಂಕು ರೂಪಾಂತರಗೊಂಡಲ್ಲಿ ಪ್ರತಿಕೂಲ ಪರಿಣಾಮ ಆಗಬಹುದು. ಹೀಗಾಗಿ, ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆದಿದೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT