ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್: ಅನಿಲ ಹರಾಜು ಸ್ಥಗಿತ

Last Updated 16 ಜನವರಿ 2023, 9:27 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಗ್ಯಾಸ್ ಮಾರ್ಕೆಟಿಂಗ್ ನಿಯಮಗಳಲ್ಲಿ ಬದಲಾವಣೆ ಮಾಡಿದ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಅದರ ಪಾಲುದಾರ ಬಿಪಿ ಪಿಎಲ್‌ಸಿ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದೆ.

ಪ್ರತಿ ದಿನ 6 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಗ್ಯಾಸ್ ಮಾರಾಟಕ್ಕೆ ಇ-ಬಿಡ್ಡಿಂಗ್ ಜನವರಿ 18 ರಂದು ನಡೆಯಬೇಕಿತ್ತು. ಆದರೆ ಕೆಜಿ-ಡಿ 6 ಬ್ಲಾಕ್‌ನಿಂದ ನೈಸರ್ಗಿಕ ಅನಿಲ ಮಾರಾಟಕ್ಕಾಗಿ ಯೋಜಿತ ಹರಾಜನ್ನು ಸ್ಥಗಿತಗೊಳಿಸಿದೆ. ಪ್ರಸ್ತುತ ಬಿಡ್ಡಿಂಗ್ ಪ್ರಕ್ರಿಯೆಯನ್ನು ಮುಂದಿನ ಸೂಚನೆ ಬರುವವರೆಗೆ ಅಮಾನತುಗೊಳಿಸಲಾಗಿದೆ ಎಂದು ಎರಡು ಸಂಸ್ಥೆಗಳು ತಿಳಿಸಿವೆ.

ಆದರೆ ಅಮಾನತಿಗೆ ಕಾರಣವನ್ನು ನೀಡಿಲ್ಲ. ನೈಸರ್ಗಿಕ ಅನಿಲದ ಮಾರಾಟದ ಮೇಲೆ ವಿಧಿಸಬಹುದಾದ ಮಾರ್ಜಿನ್ ಅನ್ನು ಮಿತಿಗೊಳಿಸುವ ಹೊಸ ನಿಯಮಗಳನ್ನು ಸರ್ಕಾರವು ಹೊರತಂದಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಬಿಗ್ ಬಜಾರ್‌ ನನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಖರೀದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT