ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀರಂ ಸಂಸ್ಥೆಯಿಂದ 'ಕೋವಿಶೀಲ್ಡ್' ಟ್ರೇಡ್‌ಮಾರ್ಕ್ ಉಲ್ಲಂಘನೆ ಅರ್ಜಿ ವಜಾ

Last Updated 31 ಜನವರಿ 2021, 4:46 IST
ಅಕ್ಷರ ಗಾತ್ರ

ಪುಣೆ: ಕೋವಿಡ್-19 ಲಸಿಕೆ ತಯಾರಿಕಾ ಸಂಸ್ಥೆ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) 'ಕೋವಿಶೀಲ್ಡ್' ಬ್ರ್ಯಾಂಡ್ ಹೆಸರನ್ನು ಬಳಕೆ ಮಾಡುವುದರ ವಿರುದ್ಧ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆಯ ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಬ್ರಿಟನ್-ಸ್ವೀಡನ್ ಕಂಪನಿ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.

ಕೋವಿಡ್-19 ಲಸಿಕೆ ಬಳಕೆಗೆ ಭಾರತೀಯ ಸರ್ಕಾರ ಅನುಮೋದನೆ ನೀಡಿದ್ದು, ಇದುವರೆಗೆ 1.1 ಕೋಟಿ ಕೋವಿಶೀಲ್ಡ್ ಲಿಸಿಕೆ ಡೋಸ್‌ಗಳನ್ನು ಖರೀದಿಸಿದೆ.

ನ್ಯಾಯಾಲಯದ ಆದೇಶದ ಪ್ರತಿ ತಕ್ಷಣಕ್ಕೆ ಲಭ್ಯವಾಗಿಲ್ಲ. ವರದಿಗಳ ಪ್ರಕಾರ ಕ್ಯೂಟಿಸ್-ಬಯೋಟೆಕ್ ಕೋವಿಶೀಲ್ಡ್ ಟ್ರೇಡ್‌ಮಾರ್ಕ್ ಸಂಬಂಧ ಅರ್ಜಿ ಸಲ್ಲಿಸಿತ್ತು. ಈಗ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

ಜನವರಿ 4ರಂದು ಕ್ಯೂಟಿಸ್-ಬಯೋಟೆಕ್ ಸಿವಿಲ್ ಕೋರ್ಟ್‌ನಲ್ಲಿ ಕೋವಿಶೀಲ್ಡ್ ಬ್ರ್ಯಾಂಡ್ ಹೆಸರಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿತ್ತು. ಎಸ್‌ಐಐಗಿಂತಲೂ ಮೊದಲೇ ಈ ಬ್ರ್ಯಾಂಡ್ ಹೆಸರನ್ನು ಸಂಸ್ಥೆಯು ಹೊಂದಿರುವುದಾಗಿ ಮತ್ತು ಸೀರಂ ಸಂಸ್ಥೆಯು ಇದೇ ಟ್ರೇಡ್‌ಮಾರ್ಕ್ ಬಳಕೆ ಮಾಡುತ್ತಿರುವುದನ್ನು ಪ್ರಶ್ನಿಸಿತ್ತು.

ಇದಕ್ಕೆ ನ್ಯಾಯಾಲಯದಲ್ಲಿ ಉತ್ತರಿಸಿರುವ ಸೀರಂ ಸಂಸ್ಥೆಯು, ಎರಡು ಕಂಪನಿಗಳು ವಿಭಿನ್ನ ಉತ್ಪನ್ನ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಟ್ರೇಡ್ ಮಾರ್ಕ್‌ನಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಎಂದು ತಿಳಿಸಿದೆ.

ಅಲ್ಲದೆ ಕ್ಯೂಟಿಸ್-ಬಯೋಟೆಕ್ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಸೀರಂ ನ್ಯಾಯವಾದಿ ಹಿತೇಶ್ ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT