ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನವನ್ನು ಕರ್ತವ್ಯಸ್ಥಾನ ಎಂದು ಮರುನಾಮಕರಣ ಮಾಡಿ: ಕೇಂದ್ರಕ್ಕೆ ಶಶಿ ತರೂರ್

Last Updated 11 ಸೆಪ್ಟೆಂಬರ್ 2022, 12:56 IST
ಅಕ್ಷರ ಗಾತ್ರ

ನವದೆಹಲಿ: ರಾಜಪಥಕ್ಕೆ ಕರ್ತವ್ಯಪಥ ಎಂದು ಮರುನಾಮಕರಣ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಾಗ್ದಾಳಿ ನಡೆಸಿದ್ದಾರೆ.

ದೇಶದ ಎಲ್ಲಾ ರಾಜಭವನಗಳನ್ನು ಕರ್ತವ್ಯ ಭವನಗಳೆಂದು ಏಕೆ ಕರೆಯಬಾರದು ಎಂಬುದಾಗಿ ಕೇಂದ್ರವನ್ನು ಪ್ರಶ್ನಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, ‘ರಾಜಪಥಕ್ಕೆ ಕರ್ತವ್ಯಪಥ ಎಂದು ಮರುನಾಮಕರಣ ಮಾಡುವುದಾದರೆ, ದೇಶದ ಎಲ್ಲಾ ರಾಜಭವನಗಳು ಕರ್ತವ್ಯ ಭವನಗಳಾಗಬೇಕಲ್ಲವೇ’ ಎಂದು ಕೇಳಿದ್ದಾರೆ.

‘ಇಷ್ಟಕ್ಕೇ ಏಕೆ ನಿಲ್ಲಿಸುತ್ತೀರಿ? ರಾಜಸ್ಥಾನವನ್ನು ಕರ್ತವ್ಯಸ್ಥಾನ ಎಂದು ಮರುನಾಮಕರಣ ಮಾಡಬಹುದಲ್ಲವೇ’ ಎಂದು ತರೂರ್‌ ಪ್ರಶ್ನಿಸಿದ್ದಾರೆ.

ದೆಹಲಿ ರಾಜಪಥವನ್ನು ಕರ್ತವ್ಯಪಥವೆಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ.

‘ರಾಜಪಥದ ಹೆಸರು ಬದಲಾವಣೆಯು ದೇಶಕ್ಕೆ ಹೊಸ ಚೈತನ್ಯ ಮತ್ತು ಸ್ಫೂರ್ತಿ ನೀಡಿದೆ. ಕಿಂಗ್ಸ್‌ವೇ ಅಥವಾ ರಾಜಪಥ ಎಂಬ ಹೆಸರು ಗುಲಾಮಗಿ‌ರಿಯ ಸಂಕೇತ. ಈಗ ಅದು ಇತಿಹಾಸಕ್ಕೆ ಸಂದು ಹೋಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT