ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಖ್ಯಾತ ’ಮಾಪ್ಪಿಲಪಟ್ಟು’ ಗಾಯಕ ಪೀರ್ ಮೊಹಮ್ಮದ್ ನಿಧನ

Last Updated 16 ನವೆಂಬರ್ 2021, 11:16 IST
ಅಕ್ಷರ ಗಾತ್ರ

ಕಣ್ಣೂರು (ಕೇರಳ): ಸಾಂಪ್ರದಾಯಿಕ ಮಾಪಿಲ ಹಾಡುಗಳ ಸುಶ್ರಾವ್ಯ ಗಾಯನಕ್ಕೆ ಪ್ರಸಿದ್ಧಿಯಾಗಿದ್ದ ಖ್ಯಾತ 'ಮಾಪಿಲಪಾಟ್ಟು' ಕಲಾವಿದ ಪೀರ್ ಮೊಹಮ್ಮದ್ (78) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಇಲ್ಲಿನ ಮುಝುಪ್ಪಿಲಂಗಾಡ್‌ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರಿಗೆ ಪತ್ನಿ ರಹಾನಾ ಮತ್ತು ನಾಲ್ವರು ಮಕ್ಕಳಿದ್ದಾರೆ.ಮೊಹಮ್ಮದ್‌ ಅವರು ಕೆಲವು ದಿನಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು.

ತಮ್ಮ ವಿಶಿಷ್ಟ ಗಾಯನ ಶೈಲಿ ಮತ್ತು ಅಪರೂಪದ ಧ್ವನಿಯಿಂದದಶಕಗಳ ಕಾಲ ಸಂಗೀತಾಸಕ್ತರನ್ನು ಮಂತ್ರಮುಗ್ಧರನ್ನಾಗಿಸಿದ್ದ ಮೊಹಮ್ಮದ್ ಅವರು 4 ಸಾವಿರಕ್ಕೂ ಅಧಿಕ ಅದ್ಭುತವಾದ ಮಾಪಿಲ ಗೀತೆಗಳನ್ನು ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT