ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾದಲ್ಲಿ ಸಾವಿರ ಪುರುಷರಿಗೆ 1,011 ಮಹಿಳೆಯರು

Last Updated 25 ಡಿಸೆಂಬರ್ 2020, 15:09 IST
ಅಕ್ಷರ ಗಾತ್ರ

ಅಗರ್ತಲ: ತ್ರಿಪುರಾದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ಲಿಂಗಾನುಪಾತ ಪ್ರಕಾರ ಪ್ರತಿ 1,000 ಪುರುಷರಿಗೆ 1,011 ಮಹಿಳೆಯರಿದ್ದಾರೆ.

ದೇಶದಲ್ಲಿ ಲಿಂಗಾನುಪಾತ ಪ್ರಮಾಣದಲ್ಲಿ ಮಹಿಳೆಯರ ಸಂಖ್ಯೆ ಇಳಿಕೆಯಾಗುತ್ತಿದ್ದರೆ, ತ್ರಿಪುರಾದಲ್ಲಿ ಮಾತ್ರ ವಿರುದ್ಧವಾಗಿದೆ. ಹೊಸ ಸಮೀಕ್ಷೆಯೊಂದರ ಪ್ರಕಾರ, ಇಲ್ಲಿ ಗಂಡು ಹಾಗೂ ಹೆಣ್ಣುಮಕ್ಕಳ ಅನುಪಾತವು 1,000:1,011 ಇದೆ.

ಇಲ್ಲಿ 2015–16ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಈ ಅನುಪಾತವು 1,000:998 ಇತ್ತು. ಈಗ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ ಎಂದು ರಾಜ್ಯಶಿಕ್ಷಣ ಸಚಿವ ರತನ್‌ ನಾಥ್‌ ತಿಳಿಸಿದ್ದಾರೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ರಿಸರ್ಚ್‌ ಸಂಸ್ಥೆಯು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು(ಎನ್‌ಎಫ್‌ಎಚ್‌ಎಸ್‌–5) ನಡೆಸಿದ್ದು, ಇದರ ಪ್ರಕಾರ ತ್ರಿಪುರಾದ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ನಗರ ಪ್ರದೇಶದಲ್ಲಿ ಪ್ರತಿ 1000 ಪುರುಷರಿಗೆ 956 ಹೆಣ್ಣುಮಕ್ಕಳಿದ್ದಾರೆ.

2015–16ಕ್ಕೆ ಹೋಲಿಸಿದರೆ 2019–20 ರಲ್ಲಿ ಜನರ ಸಾಮಾಜಿಕ –ಆರ್ಥಿಕ ಸ್ಥಿತಿಯೂ ಉತ್ತಮ ಮಟ್ಟಕ್ಕೇರಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಸಮೀಕ್ಷೆ ವರದಿ ಪ್ರಕಾರ, ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ರಾಜ್ಯದ ಶೇಕಡ 98.2 ಮನೆಗಳಿಗೆ ವಿದ್ಯುತ್‌ ಸೌಲಭ್ಯ ದೊರಕಿದೆ. ಶೌಚಾಲಯ ವ್ಯವಸ್ಥೆಯು ಶೇಕಡ 73.6 ಪ್ರಮಾಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ನೀತಿ ಆಯೋಗದ ಪ್ರಕಾರ, 2013–15ನೇ ಜನಗಣತಿ ಪ್ರಕಾರ ಭಾರತದಲ್ಲಿ ಗಂಡು– ಹೆಣ್ಣು ಅನುಪಾತವು 1,000:900 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT