ಗುರುವಾರ , ಫೆಬ್ರವರಿ 25, 2021
19 °C

ಗಣರಾಜ್ಯೋತ್ಸವ ಪರೇಡ್‌ ಪಥ ಸಂಚಲನ; ಸೈನಿಕ ತುಕಡಿಯಲ್ಲಿ ಕಡಿತ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಭರದಿಂದ ಸಿದ್ಧತೆಗಳು ಸಾಗುತ್ತಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೂರ್ವಭ್ಯಾಸ ನಡೆಯುತ್ತಿದೆ.

ಆದರೆ, ಕೋವಿಡ್-19 ಮಾನದಂಡಗಳು ಕಟ್ಟುನಿಟ್ಟಿನಿಂದ ಪಾಲನೆಯಾಗಲಿರುವುದರಿಂದ ಪಥ ಸಂಚಲನ ಹಾಗೂ ಸೈನಿಕ ಪಡೆಯಲ್ಲಿ ಕಡಿತವುಂಟಾಗಲಿದೆ.

ಹಾಗಾಗಿ ಈ ಬಾರಿ ಪ್ರೇಕ್ಷಕರಿಗೆ ಗಣರಾಜ್ಯೋತ್ಸವ ಪಥಸಂಚಲನದ ಸಂಪೂರ್ಣ ವೈಭವ ಹಾಗೂ ಮನರಂಜನೆಯನ್ನು ಸವಿಯಲು ಸಾಧ್ಯವಿಲ್ಲ. ಪಥ ಸಂಚಲವು ಕೆಂಪು ಕೋಟೆಯ ವರೆಗೂ ಸಾಗುವುದಿಲ್ಲ. ಬದಲಾಗಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಕ್ತಾಯವಾಗಲಿದೆ.

ಇದನ್ನೂ ಓದಿ: 

ಪಥಸಂಚಲನ ಅಂತರವನ್ನು ಶೇಕಡಾ 50ರಷ್ಟು ಕಡಿತಗೊಳಿಸಲಾಗಿದೆ. ಯೋಧರು ಮುಖಕ್ಕೆ ಮಾಸ್ಕ್ ಧರಿಸಲಿದ್ದು, ಈ ಬಾರಿ 12x12 ಬದಲು 12x8 ಸೈನ್ಯ ತುಕಡಿ ವ್ಯವಸ್ಥೆಯನ್ನು ಹೊಂದಿರಲಿದೆ. ಅಂದರೆ ವಾಡಿಕೆಯಂತೆ 144 ಜವಾನರ ಬದಲಾಗಿ ಒಂದು ದಳದಲ್ಲಿ 96 ಸೈನಿಕರು ಇರುತ್ತಾರೆ.

ಹಾಗಿದ್ದರೂ ಪೂರ್ವ ತರಬೇತಿಯಲ್ಲಿ ಮಾತ್ರ ಯಾವುದೇ ರಾಜಿಯಾಗಿಲ್ಲ. ಪ್ರತಿ ದಿನ ಮುಂಜಾನೆ 4.30ಕ್ಕೆ ಆಗಮಿಸುವ ಐಟಿಬಿಪಿ, ಸಿಆರ್‌ಪಿಆಫ್, ಸಿಐಎಸ್‌ಎಫ್ ಸೇರಿದಂತೆ ಸೈನಿಕ ಪಡೆ ಎಂಟರಿಂದ ಒಂಬತ್ತು ತಾಸುಗಳಷ್ಟು ಕಠಿಣ ತರಬೇತಿಯನ್ನು ನಡೆಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು