ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯುಕ್ತರಾಗಿ ರಾಜೀವ್‌ ಕುಮಾರ್‌ ನೇಮಕ

Last Updated 22 ಆಗಸ್ಟ್ 2020, 2:38 IST
ಅಕ್ಷರ ಗಾತ್ರ

ದೆಹಲಿ: ಅಶೋಕ್ ಲವಾಸಾ ಅವರ ರಾಜೀನಾಮೆಯಿಂದ ತೆರವಾಗಿರುವ ಚುನಾವಣಾ ಆಯುಕ್ತರ ಸ್ಥಾನಕ್ಕೆ ಹಣಕಾಸು ಇಲಾಖೆಯ ನಿವೃತ್ತ ಕಾರ್ಯದರ್ಶಿ ರಾಜೀವ್ ಕುಮಾರ್ ಅವರನ್ನು ಶುಕ್ರವಾರ ನೇಮಕ ಮಾಡಲಾಗಿದೆ.

ಸೆ.1ರಿಂದ ರಾಜೀವ್‌ ಕುಮಾರ್‌ ಅವರು ಭಾರತೀಯ ಚುನಾವಣಾ ಆಯೋಗದ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

‘ಜಾರ್ಖಂಡ್‌ನ 1984ರ ಬ್ಯಾಚ್‌ನ ನಿವೃತ್ತ ಐಎಎಸ್‌ ಅಧಿಕಾರಿ ರಾಜೀವ್‌ ಕುಮಾರ್‌ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕ ಮಾಡಲು ರಾಷ್ಟ್ರದ ಅಧ್ಯಕ್ಷರು ಸಂತೋಷಗೊಂಡಿದ್ದಾರೆ. ಈ ಹಿಂದಿನ ಆಯುಕ್ತರಾದ ಅಶೋಕ್‌ ಲವಾಸಾ ಅವರ ಅಧಿಕಾರವಧಿಯು ಆ. 31ಕ್ಕೆ ಕೊನೆಗೊಳ್ಳಲಿದ್ದು, ರಾಜೀವ್‌ ಕುಮಾರ್‌ ಅಧಿಕಾರ ವಹಿಸಿಕೊಂಡ ತಕ್ಷಣದಿಂದ ನೇಮಕವು ಜಾರಿಗೆ ಬರಲಿದೆ,’ ಎಂದು ಕಾನೂನು ಮಂತ್ರಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

‘ಏಷ್ಯನ್‌ ಡೆವೆಲಪ್‌ಮೆಂಟ್‌ ಬ್ಯಾಂಕ್‌’ನ ಉಪಾಧ್ಯಕ್ಷರಾಗಿ ನೇಮಕವಾದ ಹಿನ್ನೆಲೆಯಲ್ಲಿ ಅಶೋಕ್‌ ಲವಾಸಾ ಅವರು ಚುನಾವಣಾ ಆಯುಕ್ತರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಚುನಾವಣಾ ಆಯುಕ್ತರಾಗಿ ನೇಮಕಗೊಂಡಿರುವ ರಾಜೀವ್‌ ಕುಮಾರ್‌ ಸದ್ಯ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯ (ಪಿಇಎಸ್‌ಬಿ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಅಧಿಕಾರವಧಿಯು 2023ರ ವರೆಗೆ ಇದೆ. ಇದಕ್ಕೂ ಹಿಂದೆ ಅವರು 2017–2020ರ ಅವಧಿಯಲ್ಲಿ ಕೇಂದ್ರ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಚುನಾವಣಾ ಆಯುಕ್ತರಾಗಿ ಅವರ ಅಧಿಕಾರವಧಿಯು ಐದು ವರ್ಷ ಇರಲಿದ್ದು, 2025ಕ್ಕೆ ಸ್ಥಾನದಿಂದ ನಿವೃತ್ತಿ ಹೊಂದಲಿದ್ದಾರೆ. 2024ರ ಲೋಕಸಭೆ ಚುನಾವಣೆ ರಾಜೀವ್‌ ಅವರ ನೇತೃತ್ವದಲ್ಲೇ ನಡೆಯುವ ಸಾಧ್ಯತೆಗಳಿವೆ.

ನಿಯಮಗಳ ಪ್ರಕಾರ ಚುನಾವಣಾ ಆಯುಕ್ತರಾಗಿ ನೇಮಕವಾಗುವವರ ಅಧಿಕಾರವಧಿಯು 6 ವರ್ಷ, ಅಥವಾ ಅಧಿಕಾರಿಗೆ 65 ವರ್ಷ ವಯಸ್ಸಾಗುವ ವರೆಗೆ ಯಾವುದು ಮೊದಲೋ ಅಲ್ಲಿಯ ವರೆಗೆ ಇರಲಿದೆ. ರಾಜೀವ್‌ ಕುಮಾರ್‌ ಅವರು ಫೆ.1960ರಲ್ಲಿ ಜನನವಾಗಿದ್ದು, ಅವರ ಅಧಿಕಾರವಧಿ ಐದು ವರ್ಷಕ್ಕೆ ಸೀಮಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT