ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಪರಿಷ್ಕರಣೆಗೆ ಸಂಸದೀಯ ಸಮಿತಿ ಸಲಹೆ

Last Updated 20 ಮಾರ್ಚ್ 2021, 15:58 IST
ಅಕ್ಷರ ಗಾತ್ರ

ನವದೆಹಲಿ: ಇಂಧನ ಬೆಲೆ ಗಗನಮುಖಿ ಆಗಿರುವ ಹಿಂದೆಯೇ, ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣವನ್ನು ಪರಿಷ್ಕರಿಸಬೇಕು ಎಂದು ಸಂಸದೀಯ ಸಮಿತಿ ಸರ್ಕಾರವನ್ನು ಕೋರಿದೆ.

ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದ ಸುದೀಪ್‌ ಬಂಡೋಪಧ್ಯಾಯ ಅಧ್ಯಕ್ಷತೆಯ ಆಹಾರ, ಗ್ರಾಹಕ ವ್ಯವಹಾರ, ಸಾರ್ವಜನಿಕ ವಿತರಣೆ ಕುರಿತ ಸಂಸದೀಯ ಸಮಿತಿ ಈ ಸಲಹೆ ಮಾಡಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸುಂಕವಾಗಿ 2018–19ನೇ ಸಾಲಿನಲ್ಲಿ ₹ 2,29,247 ಕೋಟಿ ಸಂಗ್ರಹಿಸಲಾಗಿದೆ. 2010–11ನೇ ಸಾಲಿನಲ್ಲಿ ₹ 76,547 ಕೋಟಿ ಸಂಗ್ರಹಿಸಲಾಗಿತ್ತು ಎಂದು ಸಮಿತಿಯು ಉಲ್ಲೇಖಿಸಿದೆ. ಅಂತೆಯೇ, ಕಸ್ಟಮ್ಸ್‌ ಸುಂಕ 2010–11ನೇ ಸಾಲಿನಲ್ಲಿ ₹ 26,282 ಕೋಟಿ ಸಂಗ್ರಹವಾಗಿದ್ದರೆ, 2018–19ನೇ ಸಾಲಿನಲ್ಲಿ ₹ 76,547 ಕೋಟಿ ಸಂಗ್ರಹವಾಗಿತ್ತು ಎಂದು ಸಮಿತಿಯು ಉಲ್ಲೇಖಿಸಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮುಖ್ಯವಾಗಿ ಪೆಟ್ರೋಲ್‌ ಮತ್ತು ಡೀಸೆಲ್ ಮೇಲೆ ವಿಧಿಸುತ್ತಿರುವ ಸುಂಕ ಅತ್ಯಧಿಕವಾಗಿದೆ. ಇದನ್ನು ಪರಿಷ್ಕರಿಸುವ ಅಗತ್ಯವಿದೆ. ಪೂರಕವಾಗಿ ಇತರೆ ರಾಷ್ಟ್ರಗಳಲ್ಲಿ ಇರುವ ಕ್ರಮವನ್ನು ಪರಿಷ್ಕರಿಸಬಹುದಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT