ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ ಮೈತ್ರಿಯಲ್ಲೂ ಬಿರುಕು?

ಮಹಾರಾಷ್ಟ್ರ ಮಾದರಿಯಲ್ಲೇ ಜಾರ್ಖಂಡ್‌ನಲ್ಲೂ ಬಿಜೆಪಿ ಸರ್ಕಾರ ರಚಿಸುವ ನಿರೀಕ್ಷೆ
Last Updated 11 ಜುಲೈ 2022, 18:39 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ‘ಮಹಾ ವಿಕಾಸ ಆಘಾಡಿ’ ಸರ್ಕಾರದ ಪತನ ಮತ್ತು ಗೋವಾ ಕಾಂಗ್ರೆಸ್‌ನಲ್ಲಿನ ಬಿಕ್ಕಟ್ಟಿನ ನಂತರ ಎಲ್ಲರ ಕಣ್ಣುಗಳು ಜಾರ್ಖಂಡ್‌ ಕಡೆಗೆ ನೆಟ್ಟಿವೆ. ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ), ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಾಂಗ್ರೆಸ್‌ ಮೈತ್ರಿಕೂಟದ ಜಾರ್ಖಂಡ್‌ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲದಿರುವುದು ಮತ್ತು ತನ್ನ ತೆಕ್ಕೆಗೆ ಮತ್ತಷ್ಟು ರಾಜ್ಯಗಳನ್ನು ಸೇರಿಸಿ
ಕೊಳ್ಳಲುಬಿಜೆಪಿಯು ತೆರೆದ ಬಾಹುಗಳಿಂದ ಕಾದು ಕುಳಿತಿರುವುದೇ ಎಲ್ಲರೂ ಜಾರ್ಖಂಡ್‌ನತ್ತ ಚಿತ್ತ ಹರಿಸಲು ಕಾರಣ.

ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗಾಗಿ ವಿರೋಧ ಪಕ್ಷಗಳು ನಡೆಸಿದ್ದ ಸಭೆಯಲ್ಲಿ ಜೆಎಂಎಂಪಾಲ್ಗೊಂಡಿದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ದ್ರೌಪದಿ ಅವರು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಹಾಗಾಗಿ ಅವರನ್ನು ಬೆಂಬಲಿಸದಿರಲು ಆಗದು ಎಂದು ಜೆಎಂಎಂ ನಾಯಕ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಹೇಳಿದ್ದಾರೆ.

ಜೊತೆಗೆ, ಜಾರಿ ನಿರ್ದೇಶನಾಲಯ ಸೇರಿ ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಗಳ ಬಿಸಿಯೂ ಹೇಮಂತ್‌ ಸೊರೇನ್‌ ಅವರಿಗೆ ತಗುಲಿದೆ. ಹೇಮಂತ್‌ ಅವರು ಗಣಿಗಾರಿಕೆಯ ಪರವಾನಗಿ ಸ್ವತಃ ಪಡೆದಿದ್ದಾರೆ. ಹೀಗಾಗಿ ಅವರನ್ನು ಅನರ್ಹಗೊಳಿಸಲು ಕೋರಿ ಅವರ ವಿರುದ್ಧ ಅರ್ಜಿಯನ್ನೂ ಸಲ್ಲಿಸಲಾಗಿದೆ. ಜಾರ್ಖಂಡ್‌ ಸರ್ಕಾರ ಸಂಕಷ್ಟದಲ್ಲಿ ಇದೆ ಎಂಬುದಕ್ಕೆ ಈ ಎಲ್ಲಾ ಅಂಶಗಳೂ ಕಾರಣವಾಗಿವೆ.

ಇದನ್ನು ಒಪ್ಪದ ಕಾಂಗ್ರೆಸ್‌, ಇಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT