ಗುರುವಾರ , ಮಾರ್ಚ್ 23, 2023
32 °C

ಅಸಮಾನತೆಯಂತಹ ಪ್ರಮುಖ ಸಮಸ್ಯೆಗಳಿಗೆ ಜನಸಂಖ್ಯೆ ಹೆಚ್ಚಳವೇ ಮೂಲ ಕಾರಣ: ಯೋಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ಸಮಾಜದ ಪ್ರಮುಖ ಸಮಸ್ಯೆಗಳಿಗೆ ಜನಸಂಖ್ಯೆ ಹೆಚ್ಚಳವೇ ಕಾರಣವಾಗಿದ್ದು, ಇದರ ಬಗ್ಗೆ ಜನರು ಜಾಗೃತರಾಗಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮನವಿ ಮಾಡಿದ್ದಾರೆ.

ವಿಶ್ವ ಜನಸಂಖ್ಯಾ ದಿನವನ್ನುದ್ದೇಶಿಸಿ ಮಾತನಾಡಿರುವ ಯೋಗಿ, ʼಜನಸಂಖ್ಯೆಯ ಹೆಚ್ಚಳವು ಸಮಾಜದಲ್ಲಿ ಅಸಮಾನತೆಯಂತಹ ಪ್ರಮುಖ ಸಮಸ್ಯೆಗಳು ತಲೆದೋರಲು ಪ್ರಮುಖ ಕಾರಣವಾಗಿದೆ. ಮುಂದುವರಿದ ಸಮಾಜ ಕಟ್ಟಲು ಜನಸಂಖ್ಯೆಯನ್ನು ನಿಯಂತ್ರಿಸುವುದೇ ಪ್ರಾಥಮಿಕ ಕಟ್ಟುಪಾಡಾಗಬೇಕು. ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮನ್ನು ನಾವು ಮತ್ತು ಸಮಾಜವನ್ನು ಜಾಗೃತಗೊಳಿಸುವ ಪ್ರತಿಜ್ಞೆಯನ್ನು ಈ ಬಾರಿಯ ʼವಿಶ್ವ ಜನಸಂಖ್ಯಾ ದಿನʼದಂದು ಮಾಡೋಣʼ ಎಂದು ಕರೆ ನೀಡಿದ್ದಾರೆ.

ʼಉತ್ತರ ಪ್ರದೇಶ ಜನಸಂಖ್ಯಾ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ -2021ʼ ಕರಡನ್ನು ಉತ್ತರ ಪ್ರದೇಶ ರಾಜ್ಯದ ಕಾನೂನು ಆಯೋಗ (ಯುಪಿಎಸ್ಎಲ್‌ಸಿ) ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಜುಲೈ 19ರ ವರೆಗೆ ಸಾರ್ವಜನಿಕರು ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವಂತೆ ಕೋರಿದೆ.

ಯುಪಿಎಸ್ಎಲ್‌ಸಿ ಮುಖ್ಯಸ್ಥ ಆದಿತ್ಯನಾಥ್‌ ಮಿತ್ತಲ್‌ ಅವರು ಮಸೂದೆ ಅಂಗೀಕಾರ ಪ್ರಸ್ತಾವನೆ ಬಗ್ಗೆ ಶನಿವಾರ ಹೇಳಿದ್ದರು. ‘ರಾಜ್ಯದ ಜನಸಂಖ್ಯೆ ನಿಯಂತ್ರಣ ಮತ್ತು ಕಲ್ಯಾಣಕ್ಕಾಗಿ ಕಾನೂನು ಆಯೋಗವು ಈ ಪ್ರಸ್ತಾವನೆ ಇರಿಸಿದೆ. ಎರಡು ಮಕ್ಕಳನ್ನು ಹೊಂದುವ ನಿಯಮ ಪಾಲಿಸುವ ಯಾವುದೇ ದಂಪತಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯಲಿದ್ದಾರೆ’ ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ | ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗ ಇಲ್ಲ: ಯುಪಿಯಲ್ಲಿ ಹೊಸ ಕಾನೂನು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು