ಭಾರತೀಯ ಎನ್ಜಿಒಗಳಿಗೆ ₹ 49 ಸಾವಿರ ಕೋಟಿ ವಿದೇಶಿ ದೇಣಿಗೆ

ನವದೆಹಲಿ: ‘ಕಳೆದ ಮೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿನ 18 ಸಾವಿರಕ್ಕೂ ಹೆಚ್ಚಿನ ಸರ್ಕಾರೇತರ ಸಂಸ್ಥೆಗಳು (ಎನ್ಜಿಒ) ಸುಮಾರು ₹ 49 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವಿದೇಶಿ ದೇಣಿಗೆಯನ್ನು ಪಡೆದಿವೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
‘2017–18ರಲ್ಲಿ ₹ 16,940.58 ಕೋಟಿ, 2018–19ರಲ್ಲಿ ₹ 16,525.73 ಕೋಟಿ ಹಾಗೂ 2019–20ರಲ್ಲಿ ₹ 15,853.94 ಕೋಟಿ ಮೊತ್ತದ ವಿದೇಶಿ ದೇಣಿಗೆಯನ್ನು ಭಾರತದ ಎನ್ಜಿಒಗಳು ಪಡೆದಿವೆ’ ಎಂದು ಅವರು ವಿವರಿಸಿದ್ದಾರೆ.
‘ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2020ರ ಜಾರಿಗೆ ಮೊದಲು, ಎನ್ಜಿಒಗಳು ನಿಗದಿತ ಬ್ಯಾಂಕುಗಳ ಯಾವುದೇ ಶಾಖೆಯಲ್ಲಿ ವಿಶೇಷ ಎಫ್ಸಿಆರ್ಎ ಬ್ಯಾಂಕ್ ಖಾತೆಗಳನ್ನು ತೆರೆಯಬಹುದಿತ್ತು. ಕಾಯ್ದೆ ಜಾರಿಯಾದ ನಂತರ, ಈಗ ಎನ್ಜಿಒಗಳು ವಿದೇಶಿ ದೇಣಿಗೆಯನ್ನು ಪಡೆಯಲು ಮುಂಬೈ ಇಲ್ಲವೇ ನವದೆಹಲಿಯ ಎಸ್ಬಿಐನ ಮುಖ್ಯಶಾಖೆಯಲ್ಲಿ ಕಡ್ಡಾಯವಾಗಿ ಎಫ್ಸಿಆರ್ ಖಾತೆಗಳನ್ನು ತೆರೆಯಬೇಕು’ ಎಂದು ಅವರು ತಿಳಿಸಿದ್ದಾರೆ.
‘2021ರ ಜುಲೈ 31ರ ವೇಳೆಗೆ ನವದೆಹಲಿಯ ತನ್ನ ಮುಖ್ಯಶಾಖೆಯಲ್ಲಿ ಒಟ್ಟು 18,377 ಎಫ್ಸಿಆರ್ಎ ಖಾತೆಗಳನ್ನು ತೆರೆಯಲಾಗಿದೆ’ ಎಂದು ಎಸ್ಬಿಐ ತಿಳಿಸಿದೆ’ ಎಂದು ನಿತ್ಯಾನಂದ ಅವರು ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.