ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ₹ 500 ನೋಟುಗಳ ಸುರಿ ಮಳೆ: ಹಣಕ್ಕಾಗಿ ಮುಗಿಬಿದ್ದ ಜನ

Last Updated 19 ಫೆಬ್ರುವರಿ 2023, 10:52 IST
ಅಕ್ಷರ ಗಾತ್ರ

ಅಹಮದಾಬಾದ್‌: ನಾವು ಸಾಮಾನ್ಯವಾಗಿ ಬಾರ್‌ ಡ್ಯಾನ್ಸ್‌ರ್‌ಗಳ ಮೇಲೆ ನೋಟು ತೂರುವುದನ್ನು ನೋಡಿದ್ದೇವೆ. ಆದರೆ ವ್ಯಕ್ತಿಯೊಬ್ಬರು ತನ್ನ ಸಂಬಂಧಿ ಮದುವೆ ಕಾರ್ಯಕ್ರಮದಲ್ಲಿ ಮನೆಯ ಮೇಲಿಂದ ನೋಟಗಳನ್ನು ಜನರ ಮೇಲೆ ಎರಚಿದ್ದಾರೆ.

ಹೌದು, ಗುಜರಾತ್‌ ರಾಜ್ಯದಲ್ಲಿ ಈ ಘಟನೆ ನಡೆದಿದೆ. ಮನೆಯ ಮೇಲಿಂದ ನೋಟುಗಳನ್ನು ತೂರಿರುವ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇಲ್ಲಿನ ಮೆಹಸಾನ ಜಿಲ್ಲೆಯ ಕೇಕ್ರಿ ತಾಲೂಕಿನ ಅಗೋಲ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಸಂಬಂಧಿ ಮದುವೆ ಕಾರ್ಯಕ್ರಮದಲ್ಲಿ ತಮ್ಮ ಮನೆಯ ಮೇಲಿಂದ ₹100 ಹಾಗೂ ₹500 ಮುಖ ಬೆಲೆ ನೋಟುಗಳನ್ನು ತೂರಿದ್ದಾರೆ. ನೋಟುಗಳನ್ನು ತೆಗೆದುಕೊಳ್ಳು ಜನರು ಮುಗಿ ಬಿದಿದ್ದಾರೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ನೋಟುಗಳನ್ನು ತೂರಿದ ವ್ಯಕ್ತಿಯನ್ನು ಸ್ಥಳೀಯ ಗಾಮಪಂಚಾಯ್ತಿ ಮಾಜಿ ಅಧ್ಯಕ್ಷ ಕರೀಂ ಯಾದವ್‌ ಎಂದು ಗುರುತಿಸಲಾಗಿದೆ. ತಮ್ಮ ಸಂಬಂಧಿ ರಜಾಕ್‌ ಮದುವೆಯಲ್ಲಿ ನೋಟುಗಳನ್ನು ಮಳೆಯಂತೆ ಸುರಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿವಾಹ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು ₹ 500 ರೂ ಮುಖಬೆಲೆಯ ನೋಟುಗಳನ್ನು ರಸ್ತೆಯಲ್ಲಿ ಎರಚಿದ್ದರು. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಪ್ರಚಾರಕ್ಕಾಗಿ ₹10 ಮುಖ ಬೆಲೆಯ ನೋಟುಗಳನ್ನು ತೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT