ಶನಿವಾರ, ಮಾರ್ಚ್ 25, 2023
29 °C
ಆದಾಯ ತೆರಿಗೆ ಇಲಾಖೆ ಹೇಳಿಕೆ

ನಿರ್ಮಾಣ ಕ್ಷೇತ್ರದ ಕಂಪನಿ ಮೇಲೆ ದಾಳಿ: ಲೆಕ್ಕಪತ್ರ ಇಲ್ಲದ ₹70 ಕೋಟಿ ಆದಾಯ ಪತ್ತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕದಲ್ಲಿರುವ ನಿರ್ಮಾಣ ಕ್ಷೇತ್ರದ ಪ್ರಮುಖ ಕಂಪನಿ ಮೇಲೆ ಇತ್ತೀಚೆಗೆ ನಡೆಸಿದ ದಾಳಿ ವೇಳೆ ಲೆಕ್ಕಪತ್ರ ಇಲ್ಲದ ₹ 70 ಕೋಟಿಗೂ ಅಧಿಕ ಆದಾಯ ಪತ್ತೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ಹೇಳಿದೆ.

ಉತ್ತರ ಕರ್ನಾಟಕದಲ್ಲಿ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಅಕ್ಟೋಬರ್‌ 28ರಂದು ಶೋಧ ಕಾರ್ಯ ನಡೆಸಲಾಗಿತ್ತು ಎಂದು ಇಲಾಖೆ ತಿಳಿಸಿದೆ.

‘ಸಾಮಗ್ರಿಗಳ ಖರೀದಿ, ಕಾರ್ಮಿಕರ ವೇತನ ಹಾಗೂ ಉಪಗುತ್ತಿಗೆದಾರರಿಗೆ ಬಿಲ್‌ ಪಾವತಿ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಕಂಪನಿಯು ತನ್ನ ಲಾಭವನ್ನು ಮುಚ್ಚಿಟ್ಟಿದ್ದು ದಾಖಲೆಗಳ ಪರಿಶೀಲನೆಯಿಂದ ತಿಳಿದು ಬಂದಿದೆ’ ಎಂದು ಇಲಾಖೆ ತಿಳಿಸಿದೆ.

‘ಸಾಮಗ್ರಿಗಳ ಪೂರೈಕೆದಾರರು, ಮಾರಾಟಗಾರರಿಗೆ ಲೆಕ್ಕಪತ್ರವಿಲ್ಲದ ಹಣ ನೀಡಲಾಗಿತ್ತು. ಅವರಿಂದ ಈ ಹಣವನ್ನು ಕಂಪನಿಗೆ ಸೇರಿದ ಪ್ರಮುಖ ವ್ಯಕ್ತಿಯೊಬ್ಬರು ಪಡೆದಿರುವುದು ಸಹ ದಾಖಲೆಗಳ ಪರಿಶೀಲನೆಯಿಂದ ಗೊತ್ತಾಗಿದೆ’ ಎಂದೂ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು