ಗುರುವಾರ , ಸೆಪ್ಟೆಂಬರ್ 23, 2021
25 °C

ಮೋಹನ್‌ ಭಾಗವತ್‌ 71ನೇ ಹುಟ್ಟುಹಬ್ಬ: ಯಾವುದೇ ಆಚರಣೆ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಧನಬಾದ್: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರ 71ನೇ ಹುಟ್ಟುಹಬ್ಬ ಇಂದು. ಆದರೆ ಅವರು ಈ ದಿನವನ್ನು ಎಂದಿನಂತೆಯೇ ಕಳೆದರು. ಯಾವುದೇ ಸಂಭ್ರಮಾಚರಣೆಯನ್ನು ಆಯೋಜಿಸಿರಲಿಲ್ಲ.

ಜಾರ್ಖಂಡ್‌ನ ಧನಬಾದ್‌ನಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಭಾಗವತ್‌ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಯಾವುದೇ ಉಡುಗೊರೆಯನ್ನೂ ಸ್ವೀಕರಿಸಿಲ್ಲ. 

‘ನಾವು ಹುಟ್ಟುಹಬ್ಬ ಆಚರಣೆಯನ್ನು ನಿರೀಕ್ಷಿಸಿದ್ದೆವು. ಆದರೆ ಯಾವುದೇ ಸಂಭ್ರಮಾಚರಣೆಗಳು ನಡೆದಿಲ್ಲ. ಮೋಹನ್‌ ಭಾಗವತ್‌ ಅವರು ಯೋಜನೆಯಂತೆ ಧನಬಾದ್‌ನ ಶಾಖಾ ಶಿಕ್ಷಕರನ್ನು ಭೇಟಿಯಾದರು. ಬಳಿಕ ಜಾರ್ಖಾಂಡ್‌ನ ಆರ್‌ಎಸ್‌ಎಸ್‌ ಘಟಕದ ಕಾರ್ಯಕಾರಿ ಸದಸ್ಯರುಗಳೊಂದಿಗೆ ಮಾತುಕತೆ ನಡೆಸಿದರು’ ಎಂದು ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು