ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ 30 ಕೋಟಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲಿರುವ ಭಾರತ

Last Updated 18 ಡಿಸೆಂಬರ್ 2020, 10:01 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ವರ್ಷ ಭಾರತವು ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ ಕೋವಿಡ್–19 ಲಸಿಕೆಯ 30 ಕೋಟಿ ಡೋಸ್ ತಯಾರಿಸಲಿದೆ. ಅಂದರೆ ಈ ಮೊದಲು ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಮೂರು ಪಟ್ಟು ಲಸಿಕೆ ತಯಾರಾಗಲಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಉತ್ಪಾದಿಸಲಾದ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಮಾದರಿಗಳನ್ನು ರಷ್ಯಾ ಈಗಾಗಲೇ ಪರೀಕ್ಷಿಸುತ್ತಿದೆ ಎಂದು ನವದೆಹಲಿಯ ರಾಯಭಾರ ಕಚೇರಿ ಶುಕ್ರವಾರ ಟ್ವಿಟ್ಟರ್‌ನಲ್ಲಿ ತಿಳಿಸಿದೆ.

"ಭಾರತದಲ್ಲಿ, ನಾವು 4 ದೊಡ್ಡ ಲಸಿಕೆ ತಯಾರಕರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ" ಎಂದು ರಷ್ಯಾದ ನೇರ ಹೂಡಿಕೆ ನಿಧಿಯ (ಆರ್‌ಡಿಐಎಫ್) ಮುಖ್ಯಸ್ಥ ಡಿಮಿಟ್ರಿವ್ ರೊಸ್ಸಿಯಾ 24 ಟಿವಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಟಾಸ್ ತಿಳಿಸಿದೆ.

‘ಮುಂದಿನ ವರ್ಷ 30 ಕೋಟಿ ಡೋಸ್ ಅಥವಾ ಅದಕ್ಕಿಂತ ಹೆಚ್ಚು ಲಸಿಕೆಯನ್ನು ಭಾರತ ನಮಗಾಗಿ ತಯಾರಿಸಲಿದೆ’ ಎಂದು ಅವರು ಹೇಳಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ದೇಶವಾಗಿದ್ದು, ಜಗತ್ತು ಕೋವಿಡ್ ಹೊಡೆತಕ್ಕೆ ಸಿಲುಕಿರುವ ಈ ಸಂದರ್ಭ ಔಷಧೀಯ ಉದ್ಯಮ ಸಾಮರ್ಥ್ಯವನ್ನುವಿಸ್ತರಿಸುತ್ತದೆ.

ಭಾರತದಲ್ಲಿ ಹೆಟೆರೋ ಬಯೋಫಾರ್ಮಾ ಈಗಾಗಲೇ ಆರ್‌ಡಿಐಎಫ್ ಜೊತೆ 10 ಕೋಟಿ ಡೋಸ್ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ ಒಪ್ಪಂದ ಘೋಷಿಸಿದೆ. ಇದರ ಪರಿಣಾಮಕಾರಿತ್ವವು ಭಾರತದ ಹೊರಗೆ ನಡೆಸಿದ ಪ್ರಯೋಗಗಳಲ್ಲಿ 91% ಕ್ಕಿಂತ ಹೆಚ್ಚು ಎಂದು ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT