ಸೋಮವಾರ, ನವೆಂಬರ್ 28, 2022
20 °C

ಶಬರಿಮಲೆ: ಇಂದಿನಿಂದ ಅಯ್ಯಪ್ಪನ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಥನಂತಿಟ್ಟ (ಕೇರಳ) (ಪಿಟಿಐ): ವಾರ್ಷಿಕ ಮಂಡಲಂ– ಮಕರವಿಲಕ್ಕು ಆರಂಭಕ್ಕೂ ಮುನ್ನಾ ದಿನವಾದ ಬುಧವಾರ ಸಂಜೆ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಶೇ 40–50ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಕೋವಿಡ್‌ ಮಾರ್ಗಸೂಚಿ ಪ್ರಕಾರ ಕಳೆದ 2 ವರ್ಷ ಅಯ್ಯಪ್ಪನ ದರ್ಶನ ಪಡೆಯಲು ಭಕ್ತರ ಸಂಖ್ಯೆಯನ್ನು ಸೀಮಿತಗೊಳಿಸಲಾಗಿತ್ತು. ಆದರೆ ಈ ವರ್ಷ ನಿರ್ಬಂಧ ಇಲ್ಲ.

41 ದಿನಗಳ ವಾರ್ಷಿಕ ಮಂಡಲ ಪೂಜೆ ಗರುವಾರ ಆರಂಭವಾಗಲಿದ್ದು,  ಡಿ.27ರಂದು ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ ವರ್ಚುವಲ್‌ ಮೂಲಕ 50,000 ಜನರು ನೋಂದಣಿ ಮಾಡಿಸಿದ್ದಾರೆ. ಅಲ್ಲದೇ ಸ್ಪಾಟ್ ಬುಕ್ಕಿಂಗ್ ಕೂಡ ಇರಲಿದೆ. ಬುಧವಾರ ಸಂಜೆ 30,000 ಭಕ್ತರು ಸ್ವಾಮಿಯ ದರ್ಶನ ಪಡೆದಿದ್ದಾರೆ ಎಂದು ಕೇರಳದ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ತಿಳಿಸಿದ್ದಾರೆ.

ಎಲ್ಲ ಇಲಾಖೆಗಳಿಂದಲೂ ಭಕ್ತರಿಗೆ ಸಹಕಾರ: ದೇವಾಲಯದಲ್ಲಿ ದಕ್ಷಿಣ ಭಾಗದ ಎಲ್ಲ ಭಾಷೆಗಳಲ್ಲಿ ಮಾಹಿತಿ ಪ್ರದರ್ಶಿಸಲು ನಿರ್ಧಾರ ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ತಂಗಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್, ಆರೋಗ್ಯ ಹಾಗೂ ಸಾರಿಗೆ ಇಲಾಖೆಗಳು ತಮ್ಮ ಸಹಕಾರ ನೀಡಿವೆ. ವೈಮಾನಿಕ ಕಣ್ಗಾವಲು, ಗುಪ್ತಚರ ಅಧಿಕಾರಿಗಳು ಮತ್ತು ಕಮಾಂಡೋಗಳು ಸೇರಿದಂತೆ 13,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆಯನ್ನು ಕೇರಳ ಪೊಲೀಸರು ಮಾಡಿದ್ದಾರೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು