ಶನಿವಾರ, ಫೆಬ್ರವರಿ 4, 2023
28 °C

ಜೈಲಿನಲ್ಲಿ ಜೈನ್‌ಗೆ ವಿಶೇಷ ಚಿಕಿತ್ಸೆ ಸ್ಥಗಿತ: ಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿಯಮಗಳನ್ನು ಉಲ್ಲಂಘಿಸಿ ತಿಹಾರ್ ಜೈಲಿನೊಳಗೆ ಸಚಿವ ಸತ್ಯೇಂದರ್ ಜೈನ್ ಅವರಿಗೆ ನೀಡುತ್ತಿದ್ದ ‘ಆದ್ಯತೆಯ ಚಿಕಿತ್ಸೆ’ಯನ್ನು ಈಗ ಸ್ಥಗಿತಗೊಳಿಸಲಾಗಿದೆ ಎಂದು ದೆಹಲಿ ನ್ಯಾಯಾಲಯ ಶನಿವಾರ ಹೇಳಿದೆ.

ಧಾರ್ಮಿಕ ನಂಬಿಕೆಗಳಿಗೆ ಅನುಗುಣವಾಗಿ ವಿಶೇಷ ಆಹಾರ ಪದಾರ್ಥ ಒದಗಿಸುವಂತೆ ತಿಹಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಜೈನ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸುವಾಗ ವಿಶೇಷ ನ್ಯಾಯಾಧೀಶ ವಿಕಾಸ್‌ ಧುಲ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. 

 ಕಾರಾಗೃಹ ಡಿ.ಜಿ ಅಥವಾ ಯಾವುದೇ ಪ್ರಾಧಿಕಾರದ ಆದೇಶವಿಲ್ಲದೆ, ಜೈಲಿನ ಸಿಬ್ಬಂದಿ ಜೈನ್ ಅವರಿಗೆ ಹಣ್ಣುಗಳು ಮತ್ತು ತರಕಾರಿಗಳು ಒದಗಿಸುತ್ತಿರುವುದನ್ನು ನ್ಯಾಯಾಲಯ ಗಮನಿಸಿದೆ. ಇದು ನಿಯಮಗಳ ಉಲ್ಲಂಘಯಾಗಿದೆ ಎಂದು ಹೇಳಿದರು.

 ಅರ್ಜಿದಾರರಿಗೆ ಹಣ್ಣು ಮತ್ತು ತರಕಾರಿ ಒದಗಿಸುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆ. ಏಕೆಂದರೆ ಎಲ್ಲಾ ರಾಜ್ಯಗಳು ಕೈದಿಗಳನ್ನು ಸಮಾನವಾಗಿ ಪರಿಗಣಿಸಲು ಬದ್ಧವಾಗಿವೆ. ಜಾತಿ, ಧರ್ಮ, ಲಿಂಗ, ಧರ್ಮ, ಸ್ಥಾನಮಾನ ಇತ್ಯಾದಿಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ತಿಳಿಸಿದರು.

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು