ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ನಿಂದನೆ ಪ್ರಕರಣ: ಪ್ರಶಾಂತ್‌ ಭೂಷಣ್‌ಗೆ 30 ನಿಮಿಷಗಳ ಕಾಲಾವಕಾಶ

Last Updated 25 ಆಗಸ್ಟ್ 2020, 8:34 IST
ಅಕ್ಷರ ಗಾತ್ರ

ದೆಹಲಿ: ನ್ಯಾಯಾಂಗದ ವಿರುದ್ಧದ ಟ್ವೀಟ್‌ಗಳ ಬಗ್ಗೆ ವಿಷಾದ ವ್ಯಕ್ತಪಡಿಸದಿರುವ ತಮ್ಮ ನಿಲುವನ್ನು ಪರಾಮರ್ಶಿಸುವಂತೆ ಸುಪ್ರೀಂ ಕೋರ್ಟ್ ಹಿರಿಯ ವಕೀಲ‌ ಪ್ರಶಾಂತ್ ಭೂಷಣ್ ಅವರಿಗೆ 30 ನಿಮಿಷ ಕಾಲಾವಕಾಶ ನೀಡಿದೆ.

ಈ ಪ್ರಕರಣದಲ್ಲಿ ವಕೀಲ ಪ್ರಶಾಂತ್‌ ಭೂಷಣ್‌ ದೋಷಿ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ.

ಕ್ಷಮಾಧಾನಕ್ಕೆ ಅಟಾರ್ನಿ ಜನಲರ್‌ ಕೆ.ಕೆ ವೇಣುಗೋಪಾಲ್‌ ಸಮ್ಮತಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಪ್ರಶಾಂತ್‌ ಭೂಷಣ್‌ ಅವರಿಗೆ ಮತ್ತೊಂದು ಅವಕಾಶ ನೀಡಿತು.

ಭೂಷಣ್ ಅವರ ಟ್ವೀಟ್‌ಗಳ ಕುರಿತು ನ್ಯಾಯಮೂರ್ತಿಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ ಅಟಾರ್ನಿ ಜನರಲ್‌ ಅವರಅಭಿಪ್ರಾಯ ಕೇಳಿತು. ಆಗ ‘ಅವರು (ಭೂಷಣ್) ತಮ್ಮ ಎಲ್ಲಾ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ವಿಷಾದ ವ್ಯಕ್ತಪಡಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT