ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ: ಅಜಂ ಖಾನ್‌ಗೆ 'ಸುಪ್ರೀಂ'ನಿಂದ ಮಧ್ಯಂತರ ಜಾಮೀನು

Last Updated 19 ಮೇ 2022, 12:42 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ಗುರುವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್. ನಾಗೇಶ್ವರ ರಾವ್ ಅವರ ನೇತೃತ್ವದ ಪೀಠವು, 2 ವಾರಗಳಲ್ಲಿ ಸಾಮಾನ್ಯ ಜಾಮೀನಿಗಾಗಿ ಅರ್ಜಿ ಸಲ್ಲಿಸುವಂತೆ ಅಜಂ ಖಾನ್ ಅವರಿಗೆ ಸೂಚಿಸಿದೆ. ಈ ಜಾಮೀನು ಅರ್ಜಿಯನ್ನುತನ್ನ ಯಾವುದೇ ಹೇಳಿಕೆಯಿಂದ ಪ್ರಭಾವಿತರಾಗದೆ, ನಿರ್ಧರಿಸುವಂತೆಯೂ ವಿಚಾರಣಾಧೀನ ನ್ಯಾಯಾಯಲಕ್ಕೆ ತಿಳಿಸಿದೆ.

ಸಂವಿಧಾನದ 142ನೇ ವಿಧಿಯಡಿ ಇರುವ ಪರಮಾಧಿಕಾರವನ್ನು ಬಳಸಿಕೊಂಡು ಅರ್ಜಿದಾರನಿಗೆ ಮಧ್ಯಂತರ ಜಾಮೀನು ನೀಡಲು ಈ ಪ್ರಕರಣ ಸೂಕ್ತವಾಗಿದೆ ಎಂದಿರುವ ನ್ಯಾಯಾಲಯವು,ಅಜಂ ಖಾನ್ ಅವರ ಸಾಮಾನ್ಯ ಜಾಮೀನಿನ ಕುರಿತು, ವಿಚಾರಣಾಧೀನ ನ್ಯಾಯಾಲಯ ತೀರ್ಮಾನಿಸುವವರೆಗೆ ಮಧ್ಯಂತರ ಜಾಮೀನಿನ ಅವಧಿ ಇರಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT