ಜಾತಿಗಳಿಗೆ ಹಿಂದುಳಿದ ಸ್ಥಾನ: ರಾಜ್ಯಗಳಿಗೆ ಅಧಿಕಾರ ಇದೆಯೇ?

ನವದೆಹಲಿ: ಮೀಸಲಾತಿಗಾಗಿ ನಿರ್ದಿಷ್ಟ ಜಾತಿಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ರೀತಿಯಲ್ಲಿ ಹಿಂದುಳಿದೆ ಎಂದು ಘೋಷಿಸಲು ರಾಜ್ಯಗಳ ಶಾಸಕಾಂಗಗಳು ಸಮರ್ಥವಾಗಿವೆಯೇ ಎಂಬ ಮಹತ್ವದ ಪ್ರಶ್ನೆಯನ್ನು ಸುಪ್ರೀಂಕೋರ್ಟ್ ಕೇಳಿದೆ. ಅಲ್ಲದೆ ನ್ಯಾಯಾಲಯವು ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ರಾಜ್ಯಗಳಿಗೆ ಸೂಚಿಸಿದೆ.
ಈ ಮೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಅವರು ಸಿದ್ಧಪಡಿಸಿರುವ ಪಟ್ಟಿಯಲ್ಲಿ ಹೆಸರಿಸಲಾಗಿರುವ ನಿರ್ದಿಷ್ಟ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಾಗಿ ಸಂವಿಧಾನದ 102 ನೇ ತಿದ್ದುಪಡಿಯ ವ್ಯಾಖ್ಯಾನವನ್ನು ನ್ಯಾಯಾಲಯ ಪರಿಶೀಲಿಸಲಿದೆ.
338 ಬಿ ವಿಧಿಯು ರಾಷ್ಟ್ರೀಯ ಹಿಂದುಳಿದ ವರ್ಗದ ಆಯೋಗದ ರಚನೆ, ಕರ್ತವ್ಯಗಳು ಮತ್ತು ಅಧಿಕಾರದ ಬಗ್ಗೆ ಪ್ರಸ್ತಾಪಿಸಲಾಗಿದೆ, 342 ಎ ವಿಧಿಯು ಒಂದು ನಿರ್ದಿಷ್ಟ ಜಾತಿಯನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಎಂದು ತಿಳಿಸುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡಿದೆ. 102ನೇ ತಿದ್ದುಪಡಿಯ ಮೂಲಕ ಸಿಇಬಿಸಿ ಪಟ್ಟಿ ಸಿದ್ಧಪಡಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಲಾಗಿದೆ.
ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮರಾಠ ಮೀಸಲಾತಿ ಕಾನೂನಿನ ಸಿಂಧುತ್ವ ಮತ್ತು ಒಂದು ನಿರ್ದಿಷ್ಟ ಜಾತಿಯನ್ನು ಸಾಮಾಜಿಕವಾಗಿ ಮತ್ತು ಘೋಷಿಸಲು ರಾಜ್ಯ ಶಾಸಕಾಂಗವು ಸಮರ್ಥವಾಗಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುವಾಗ 102 ನೇ ತಿದ್ದುಪಡಿಯ ವ್ಯಾಖ್ಯಾನದ ಪ್ರಶ್ನೆ ಉದ್ಭವಿಸಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಈ ಪೀಠದ ಮುಖ್ಯಸ್ಥರಾಗಿದ್ದು, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಎಸ್. ಅಬ್ದುಲ್ ನಜೀರ್, ಹೇಮಂತ್ ಗುಪ್ತಾ ಮತ್ತು ರವೀಂದ್ರ ಭಟ್ ಈ ಪೀಠದಲ್ಲಿ ಇದ್ದಾರೆ.
ಓದಿ: ದೇಶಕ್ಕೆ ಮೋದಿ ಹೆಸರಿಡುವ ದಿನಗಳು ದೂರ ಇಲ್ಲ: ಮಮತಾ ಬ್ಯಾನರ್ಜಿ
‘ವಿವಿಧ ಪಕ್ಷಗಳು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ್ದೇವೆ. ಆದರೆ ಸಂವಿಧಾನದ 102 ನೇ ತಿದ್ದುಪಡಿಯ ವ್ಯಾಖ್ಯಾನವು ಬಹಳ ಪ್ರಮುಖವಾದ್ದರಿಂದ ರಾಜ್ಯಗಳಿಗೆ ಶಾಸಕಾಂಗದ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ’ ಎಂದು ಪೀಠ ಹೇಳಿದೆ.
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೆಲವೊಂದು ಬಣಗಳು, ‘ಎಲ್ಲಾ ರಾಜ್ಯಗಳಿಗೆ ವ್ಯಾಖ್ಯಾನದ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಇದರಿಂದಾಗಿ ವಿಚಾರಣೆಯಲ್ಲಿ ವಿಳಂಬವಾಗಬಹುದು. ಇದರ ಬದಲಿಗೆ ಕೇವಲ ಸಂಬಂಧಪಟ್ಟ ರಾಜ್ಯಕ್ಕೆ ವ್ಯಾಖ್ಯಾನಕ್ಕೆ ಪ್ರತಿಕ್ರಿಯಿಸುವಂತೆ ಸೂಚಿಸುವುದು ಒಳಿತು’ ಎಂದು ಹೇಳಿದೆ.
2018ರ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠ ಮೀಸಲಾತಿ ಕಾನೂನು ಬಗ್ಗೆ ಮಾರ್ಚ್ 8 ರಿಂದ ವಿಚಾರಣೆ ಆರಂಭಗೊಳಿಸಿ, ಮಾರ್ಚ್ 18ರೊಳಗೆ ವಿಚಾರಣೆ ಪೂರ್ಣಗೊಳಿಸುವುದಾಗಿ ಸುಪ್ರೀಕೋರ್ಟ್ ಫೆಬ್ರುವರಿ 5 ರಂದು ಹೇಳಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.