ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಠಡಿ ಒಳಗೇ ಮಗು ಬಿಟ್ಟು ಬೀಗ ಹಾಕಿ ತೆರಳಿದ ಶಾಲಾ ಸಿಬ್ಬಂದಿ

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಘಟನೆ
Last Updated 8 ಜುಲೈ 2022, 15:23 IST
ಅಕ್ಷರ ಗಾತ್ರ

ಬಲ್ಲಿಯಾ: 5 ವರ್ಷದ ವಿದ್ಯಾರ್ಥಿ ಶಾಲೆಯ ಕೊಠಡಿಯ ಒಳಗೆ ಇರುವುದನ್ನು ಗಮನಿಸದೆ ಸಿಬ್ಬಂದಿ ಕೋಣೆಯ ಬಾಗಿಲನ್ನು ಹಾಕಿಕೊಂಡು ಹೋದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.

ಶಾಲೆ ಅವಧಿ ಮುಗಿದರೂ ಆದಿತ್ಯ ಮನೆಗೆ ಬರದಿದ್ದರಿಂದ ಕಂಗಾಲದ ಕುಟುಂಬ, ಕೊನೆಗೆ ಶಾಲೆಯ ಬಾಗಿಲನ್ನು ಒಡೆದು ಮಗುವನ್ನು ರಕ್ಷಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ಕೊಠಡಿಯ ಒಳಗೆ ಮಗು ಆಕ್ರಂದಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ.

ಮಗು ತರಗತಿಯಲ್ಲೇ ನಿದ್ರೆ ಹೋಗಿದ್ದರಿಂದ ಸಿಬ್ಬಂದಿ ತಿಳಿಯದೇ ಬಾಗಿಲು ಹಾಕಿಕೊಂಡು ತೆರಳಿದ್ದಾರೆ. ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT