ಗುರುವಾರ , ಜುಲೈ 7, 2022
23 °C

ಸಿಕಂದರಾಬಾದ್‌: ಗೋದಾಮಿನಲ್ಲಿ ಬೆಂಕಿ, ಸುಟ್ಟು ಕರಕಲಾದ 11 ಮಂದಿ ವಲಸೆ ಕಾರ್ಮಿಕರು

ಪಿಟಿಐ Updated:

ಅಕ್ಷರ ಗಾತ್ರ : | |

ಪ್ರಾತಿನಿಧಿಕ ಚಿತ್ರ

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಭೋಯಿಗುಡದಲ್ಲಿರುವ ಗುಜರಿ ವಸ್ತುಗಳ ಗೋಡೌನ್‌ನಲ್ಲಿ ಬುಧವಾರ ನಸುಕಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬಿಹಾರ ಮೂಲದ 11 ವಲಸೆ ಕಾರ್ಮಿಕರು ಸಜೀವ ದಹನವಾಗಿದ್ದಾರೆ. ಕಾರ್ಮಿಕರ ದೇಹಗಳು ಗುರುತು ಹಿಡಿಯಲಾಗದಷ್ಟು ಪ್ರಮಾಣದಲ್ಲಿ ಸುಟ್ಟಿದ್ದು, ಡಿಎನ್ಎ ಪರೀಕ್ಷೆಯಿಂದ ಮಾತ್ರವೇ ಸಂತ್ರಸ್ತರ ಗುರುತು ಪತ್ತೆ ಸಾಧ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಘಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಶೋಕ ವ್ಯಕ್ತಪಡಿಸಿದ್ದಾರೆ. 

ಬೆಂಕಿ ದುರಂತ ಸಂಭವಿಸಿದ ಗೋಡೌನ್‌ ಇದ್ದ ಕಟ್ಟಡದ ಮೇಲಿನ ಕೊಠಡಿಯಲ್ಲಿ ಸಂತ್ರಸ್ತರು ಮಲಗಿದ್ದರು. ಆದರೆ ನಿದ್ದೆಯ ಮಂಪರಿನಿಂದ ಹೊರಬರುವಷ್ಟರಲ್ಲಿ ಅವರು ಬೆಂಕಿಯ ಕೆನ್ನಾಲಿಗೆಗೆ ಸಾವಿಗೀಡಾಗಿದ್ದರು. ಗುಜರಿ ಗೋಡೌನ್‌ನಲ್ಲಿ ಅಗತ್ಯ ಅಗ್ನಿ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲದಿಲ್ಲವೆಂಬುದು ಗೊತ್ತಾಗಿದೆ. ಒಬ್ಬ ವ್ಯಕ್ತಿ ಮಾತ್ರ ಕೊಠಡಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಎಲ್ಲಾ ಸಂತ್ರಸ್ತರು ಬಿಹಾರದ ಚಪ್ರಾ ಜಿಲ್ಲೆಯವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ–

ಕೇಂದ್ರ 2 ಲಕ್ಷ ರೂಪಾಯಿ ಪರಿಹಾರ
ಸಜೀವ ದಹನವಾದ ಬಿಹಾರ ಮೂಲದ 11 ವಲಸೆ ಕಾರ್ಮಿಕರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ₹2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು