ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥ್‌ ಯೋಜನೆ ವಿರುದ್ಧ ರಾಹುಲ್‌ ಮತ್ತೆ ಕಿಡಿ

Last Updated 24 ಜುಲೈ 2022, 11:03 IST
ಅಕ್ಷರ ಗಾತ್ರ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯೋಗಾಲಯದ ಹೊಸ ಪ್ರಯೋಗ ‘ಅಗ್ನಿಪಥ್’ ಯೋಜನೆಯಿಂದ ದೇಶದ ಭದ್ರತೆ ಮತ್ತು ಯುವಜನರ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಪ್ರತಿ ವರ್ಷ 60 ಸಾವಿರ ಸೈನಿಕರು ನಿವೃತ್ತರಾಗುತ್ತಿದ್ದು, ಅದರಲ್ಲಿ ಕೇವಲ 3 ಸಾವಿರ ಸೈನಿಕರು ಮಾತ್ರ ಸರ್ಕಾರಿ ಉದ್ಯೋಗ ಪಡೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

‘ಅಗ್ನಿಪಥ್‌’ದಡಿ ಸೇನೆಗೆ ಆಯ್ಕೆಯಾಗಿ, ನಾಲ್ಕು ವರ್ಷಗಳ ಗುತ್ತಿಗೆ ಸೇವಾ ಅವಧಿ ಮುಗಿಸಿ ನಿವೃತ್ತರಾಗುವ ಸಾವಿರಾರು ‘ಅಗ್ನಿವೀರ’ರ ಮುಂದಿನ ಭವಿಷ್ಯವೇನು? ಎಂದು ಪ್ರಶ್ನಿಸಿರುವ ರಾಹುಲ್‌,ಪ್ರಧಾನಮಂತ್ರಿಯವರ ಪ್ರಯೋಗದ ಈ ಹೊಸ ಪ್ರಯೋಗವು, ದೇಶದ ಭದ್ರತೆ ಮತ್ತು ಯುವಜನರ ಭವಿಷ್ಯವನ್ನೂ ಅಪಾಯಕ್ಕೆ ಸಿಲುಕಿಸಿದೆ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT