ಸೋಮವಾರ, ಆಗಸ್ಟ್ 8, 2022
25 °C

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕೇರಳ ರಾಜಕಾರಣಿ ಪಿ.ಸಿ ಜಾರ್ಜ್‌ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಮಾಜಿ ಶಾಸಕ ಪಿ.ಸಿ. ಜಾರ್ಜ್‌ ಅವರನ್ನು ಇಲ್ಲಿನ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪಿ.ಸಿ. ಜಾರ್ಜ್‌ ಅವರು ಫೆಬ್ರುವರಿ 10ರಂದು ಅತಿಥಿಗೃಹದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಹುಕೋಟಿ ಸೌರಫಲಕ ಹಗರಣದ ಮಹಿಳಾ ಆರೋಪಿಯೊಬ್ಬರು ದೂರಿನಲ್ಲಿ ಆರೋಪಿಸಿದ್ದಾರೆ.

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹಾಗೂ ಕಾಂಗ್ರೆಸ್‌ನ ಕೆಲ ನಾಯಕರ ವಿರುದ್ಧವೂ ಇದೇ ಮಹಿಳೆ ಈ ಹಿಂದೆ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈ ಸಂಬಂಧ ಸಿಬಿಐ ತನಿಖೆ ನಡೆಯುತ್ತಿದೆ.

‘ಇದೊಂದು ಸುಳ್ಳು ಪ್ರಕರಣ. ಉಮ್ಮನ್‌ ಚಾಂಡಿ ಅವರ ವಿರುದ್ಧ ಹೇಳಿಕೆ ನೀಡಬೇಕೆಂಬ ದೂರುದಾರ ಮಹಿಳೆಯ ಒತ್ತಡಕ್ಕೆ ಮಣಿಯದ ಕಾರಣ ಪಿತೂರಿ ನಡೆಸಿ ನನ್ನ ವಿರುದ್ಧ ಈ ಆರೋಪ ಮಾಡಲಾಗಿದೆ’ ಎಂದು ಪಿ.ಸಿ. ಜಾರ್ಜ್‌ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ವಿರುದ್ಧ ಈಚೆಗೆ ಆರೋಪ ಮಾಡಿದ್ದ ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್‌ ಜೊತೆ ಸೇರಿ ಪಿ.ಸಿ. ಜಾರ್ಜ್‌ ಅವರು ಪಿತೂರಿ ನಡೆಸಿದ್ದರು ಎಂಬ ಆರೋಪವೂ ಈಚೆಗೆ ಕೇಳಿಬಂದಿತ್ತು.

ಮುಖ್ಯಮಂತ್ರಿ ವಿರುದ್ಧ ಪಿತೂರಿ ನಡೆಸಿದ ಪ್ರಕರಣಕ್ಕೆ ಸಂಂಧಿಸಿದಂತೆ ಪೊಲೀಸರು ಜಾರ್ಜ್‌ ಅವರಿಗೆ ಶನಿವಾರ ಸಮನ್ಸ್‌ ನೀಡಿದ್ದರು. ಬಳಿಕ ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು