ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ತನಿಖೆಗೆ 8 ರಾಜ್ಯಗಳಿಂದ ಅನುಮತಿ ನಿರಾಕರಣೆ: ‘ಗಂಭೀರ ಸಮಸ್ಯೆ’ಎಂದ ಸುಪ್ರೀಂ

Last Updated 8 ನವೆಂಬರ್ 2021, 15:55 IST
ಅಕ್ಷರ ಗಾತ್ರ

ನವದೆಹಲಿ: ಸಿಬಿಐ ತನಿಖೆಗೆ ಅನುಮತಿ ನಿರಾಕರಣೆ ಮಾಡಿರುವ ಕೆಲ ರಾಜ್ಯ ಸರ್ಕಾರಗಳ ವರ್ತನೆ ಬಗ್ಗೆ ಸೋಮವಾರ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅಂತಹ 150 ಮನವಿಗಳು ಈ ರಾಜ್ಯ ಸರ್ಕಾರಗಳ ಮುಂದೆ ಬಾಕಿ ಇರುವುದು ಕಂಡುಬಂದಿದೆ.

ಪಶ್ಚಿಮ ಬಂಗಾಳ, ಮಹಾರಾಷ್ಟರ, ಕೇರಳ, ಪಂಜಾಬ್, ರಾಜಸ್ಥಾನ, ಜಾರ್ಖಂಡ್, ಛತ್ತೀಸ್‌ಗಡ ಮತ್ತು ಮಿಜೋರಾಂ ರಾಜ್ಯಗಳು ಡಿಎಸ್‌ಪಿಇ ಕಾಯ್ದೆ ಅಡಿ ಕೆಲ ಪ್ರಕರಣಗಳ ತನಿಖೆಗೆ ಈ ಹಿಂದೆ ನೀಡಿದ್ದ ಅನುಮೋದನೆಯನ್ನು ಹಿಂಪಡೆದಿದ್ದು, 150 ಮನವಿಗಳು ಈ ರಾಜ್ಯಗಳ ಮುಂದೆ ಬಾಕಿ ಇವೆ ಎಂದು ಸೋಮವಾರ ಸಿಬಿಐ, ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

‘ಪ್ರಮುಖವಾಗಿ ಕೇಂದ್ರ ಸೇವೆಯ ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳನ್ನೊಳಗೊಂಡ ಶೇಕಡಾ 18ರಷ್ಟು ಪ್ರಕರಣಗಳ ತನಿಖೆಗೆ ಮಾತ್ರ ಈ ರಾಜ್ಯಸರ್ಕಾರಗಳು ಅನುಮೋದನೆ ನೀಡಿದ್ದು, ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಬ್ಯಾಂಕ್ ವಂಚನೆಯಂತಹ ಪ್ರಮುಖ ಪ್ರಕರಣಗಳನ್ನೊಳಗೊಂಡ ಶೇಕಡಾ 78ರಷ್ಟು ಪ್ರಕರಣಗಳ ತನಿಖೆಗೆ ರಾಜ್ಯಗಳು ಅನುಮೋದನೆ ನೀಡಿಲ್ಲ’ಎಂದು ಸಿಬಿಐ ತಿಳಿಸಿದೆ.

ಪ್ರಮುಖ ಪ್ರಕರಣಗಳ ಸಿಬಿಐ ತನಿಖೆಗೆ ರಾಜ್ಯಗಳು ಅವಕಾಶ ನೀಡದಿರುವುದು ‘ಗಂಭೀರ ಸಮಸ್ಯೆ’ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಸ್ಥಳೀಯ ನ್ಯಾಯಾಲಯ, ಹೈಕೋರ್ಟ್ ಮತ್ತು ಸುಪ್ರೀಂ ಕೋರಟ್‌ಟನಲ್ಲಿ ಬಾಕಿ ಇರುವ ಸಿಬಿಐ ಮನವಿಗಳ ಬಗ್ಗೆಯೂ ಪೀಠ ಕಳವಳ ವ್ಯಕ್ತಪಡಿಸಿದೆ.

ಸಿಬಿಐ ಪ್ರಕಾರ, ಸೆಷನ್ಸ್ ನ್ಯಾಯಾಲಯಗಳಲ್ಲಿ 327, ಹೈಕೋ್ರ್ಟ್‌ನಲ್ಲಿ 12,258, ಸುಪ್ರೀಂ ಕೋರ್ಟ್‌ನಲ್ಲಿ 706 ಸೇರಿ ಒಟ್ಟು 13,291 ಮನವಿಗಳು, ರಿಟ್ ಅರ್ಜಿಗಳು ಬಾಕಿ ಇವೆ.

ವಿಚಾರಣಾ ಸಂದರ್ಭದಲ್ಲಿಯೇ ಹಲವು ಪ್ರಕರಣಗಳಿಗೆ ತಡೆ ನೀಡಿರುವುದು ಸಹ ತನಿಖೆಗೆ ತೊಡಕಾಗಿದೆ ಎಂದು ಸಿಬಿಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT