ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎನ್‌ಟಿಇಪಿಯಲ್ಲಿ ಸಿವೈ–ಟಿಬಿ ಚುಚ್ಚುಮದ್ದು ಸೇರಿಸಿ’

Last Updated 4 ಜುಲೈ 2022, 14:38 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತಾವು ಉತ್ಪಾದಿಸಿರುವ ‘ಸಿವೈ–ಟಿಬಿ’ ಚುಚ್ಚುಮದ್ದನ್ನುರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ (ಎನ್‌ಟಿಇಪಿ) ಸೇರ್ಪಡೆ ಮಾಡುವಂತೆ ಸೀರಂ ಇನ್‌ಸ್ಟಿಟ್ಯೂಟ್‌, ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಮಾಡಿದೆ.

‘ದೇಹದೊಳಗೆ ಸುಪ್ತವಾಗಿರುವ ಕ್ಷಯರೋಗವನ್ನು ಪತ್ತೆಹಚ್ಚಲು‘ಸಿವೈ–ಟಿಬಿ’ ಚುಚ್ಚುಮದ್ದು ಸಹಕಾರಿಯಾಗಿದೆ. ಡೋಸ್‌ ಒಂದಕ್ಕೆ ₹350ರಂತೆ ಅಗತ್ಯವಿರುವಷ್ಟು ಚುಚ್ಚುಮದ್ದು ಪೂರೈಸಲು ನಾವು ಸಿದ್ಧರಿದ್ದೇವೆ. ಇದರಲ್ಲಿ ಜಿಎಸ್‌ಟಿ ಕೂಡ ಸೇರಿರಲಿದೆ ಎಂದು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಔಷಧ ನಿಯಂತ್ರಣಾಲಯವು (ಡಿಸಿಜಿಐ) ‘ಸಿವೈ–ಟಿಬಿ’ ಚುಚ್ಚುಮದ್ದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಈ ವರ್ಷದಮೇ 9ರಂದು ಅನುಮತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT