ಹೈದರಾಬಾದ್: ‘ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸರ್ಕಾರದ ಕಾಲೇಶ್ವರಂ ನೀರಾವರಿ ಯೋಜನೆಯ ಜಾರಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ’ ಎಂದು ಆರೋಪಿಸಿ ವೈಎಸ್‌ಆರ್ ತೆಲಂಗಾಣದ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರು ದೆಹಲಿಯಲ್ಲಿ ಜಂತರ್ ಮಂತರ್‌ನಿಂದ ‘ಸಂಸತ್ತು ಚಲೋ’ ಚಳವಳಿ ನಡೆಸಿದರು. ಈ ವೇಳೆ ಶರ್ಮಿಳಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.
ಬಿಆರ್‌ಎಸ್ ಹಾಗೂ ಸರ್ಕಾರದ ವಿರುದ್ಧ ಶರ್ಮಿಳಾ ಅವರು ತೆಲಂಗಾಣದಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಈಗ ಅವರು ತಮ್ಮ ವಿರೋಧವನ್ನು ದೆಹಲಿಯಲ್ಲಿ ದಾಖಲಿಸಲು ಮುಂದಾಗಿದ್ದಾರೆ.
‘ನೀರಾವರಿ ಯೋಜನೆ ಜಾರಿಯಲ್ಲಿ ಆದ ಭ್ರಷ್ಟಾಚಾರವನ್ನು ರಾಷ್ಟ್ರಮಟ್ಟದಲ್ಲಿ ಬಹಿರಂಗಪಡಿಸುತ್ತೇನೆ. 2ಜಿ ಹಾಗೂ ಕಲ್ಲಿದ್ದಲು ಹಗರಣಗಳಿಗಿಂತಲೂ ಈ ಹಗರಣ ದೊಡ್ಡದಿದೆ. ಈ ಕುರಿತು ತನಿಖೆ ನಡೆಯಬೇಕು’ ಎಂದು ಶರ್ಮಿಳಾ ಆರೋಪಿಸಿದರು. ಸಂಸತ್ತಿನ ಕಡೆಗೆ ಹೊರಟಿದ್ದ ಶರ್ಮಿಳಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.