ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಬವಾನಾದಲ್ಲಿ ಎನ್‌ಕೌಂಟರ್‌: ಶಾರ್ಪ್‌ಶೂಟರ್ ಸೇರಿ ಮೂವರ ಬಂಧನ

Last Updated 11 ನವೆಂಬರ್ 2021, 6:07 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಹೊರವಲಯದ ಬವಾನಾದಲ್ಲಿ ಗುರುವಾರ ಬೆಳಿಗ್ಗೆ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ರಾಜೇಶ್‌ ಬವಾನಾ ಗ್ಯಾಂಗ್‌ನ ಶಾರ್ಪ್‌ ಶೂಟರ್‌ ಮತ್ತು ಇಬ್ಬರು ಸಹಚರರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜೇಶ್ ಬವಾನಾ ಗ್ಯಾಂಗ್‌ನ ಶಾರ್ಪ್ ಶೂಟರ್‌ ಮನ್‌ಬೀರ್‌ ಅಲಿಯಾಸ್‌ ರಾಂಚೊ(24), ನರೇಶ್‌(42) ಮತ್ತು ಮದನ್‌(36) ಬಂಧಿತರು. ಎನ್‌ಕೌಂಟರ್‌ನಲ್ಲಿ ಮನ್‌ಬೀರ್‌ ಬಲಗಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಮೂವರು ಆರೋಪಿಗಳು, ಆಸ್ತಿಮಾರಾಟಗಾರರೊಬ್ಬರನ್ನು ಕೊಲ್ಲುವ ಯೋಜನೆಯೊಂದಿಗೆ ಬವಾನಾಕ್ಕೆ ಬಂದಿದ್ದರು. ಖಚಿತ ಮಾಹಿತಿಯೊಂದಿಗೆ ಎನ್‌ಕೌಂಟರ್‌ ನಡೆಸಿದ ಪೊಲೀಸರ ತಂಡ, ಮೂವರನ್ನುಬಂಧಿಸುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT