ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‌ ನಿಧನಕ್ಕೆ ಶಶಿ ತರೂರ್ ಸಂತಾಪ: ಬಿಜೆಪಿ ತರಾಟೆ

Last Updated 5 ಫೆಬ್ರುವರಿ 2023, 13:13 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ, ನಿವೃತ್ತ ಜನರಲ್‌ ಪರ್ವೇಜ್ ಮುಷರಫ್‌ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಶಶಿ ತರೂರ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಒಮ್ಮೆ ಭಾರತದ ಬದ್ಧ ವೈರಿಯಾಗಿದ್ದ ಅವರು, 2002 ರಿಂದ 2007ರ ಅವಧಿಯಲ್ಲಿ ಶಾಂತಿಯ ನಿಜವಾದ ಶಕ್ತಿಯಾಗಿದ್ದರು’ ಎಂದು ಹೇಳಿದ್ದಾರೆ.

ತರೂರ್ ಅವರ ಈ ಹೇಳಿಕೆಗಾಗಿ ಬಿಜೆಪಿಯು ತೀವ್ರ ತರಾಟೆಗೆ ತೆಗೆದುಕೋಂಡಿದೆ. ‘ಕಾಂಗ್ರೆಸ್‌ ಪಕ್ಷವು ಪಾಕಿಸ್ತಾನದ ಧ್ಯಾನದಲ್ಲಿ ತೊಡಗಿದೆ’ ಎಂದು ಬಿಜೆಪಿ ವಕ್ತಾರ ಶೆಹನಾಜ್‌ ಪೂನಾವಾಲಾ ಟೀಕಿಸಿದ್ದಾರೆ.

‘ಜನರಲ್‌ ಪರ್ವೇಜ್ ಮುಷರಫ್‌ ಅವರು ಕಾರ್ಗಿಲ್‌ನ ರೂವಾರಿ. ಸರ್ವಾಧಿಕಾರಿ. ಹಲವು ಗಂಭೀರ ಅಪರಾಧಗಳಲ್ಲಿ ಅಪರಾಧಿ. ತಾಲಿಬಾನ್‌ ಮತ್ತು ಒಸಾಮರನ್ನು ಕ್ರಮವಾಗಿ ಸೋದರರು, ಹೀರೋಗಳು ಎಂದಿದ್ದವರು. ಇಂಥವರನ್ನು ಕಾಂಗ್ರೆಸ್‌ ಪಕ್ಷವು ಹೊಗಳುತ್ತಿದೆ’ ಎಂದು ಪೂನಾವಾಲಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT