ಶನಿವಾರ, ಡಿಸೆಂಬರ್ 5, 2020
19 °C

ನನ್ನ ಸ್ಫೂರ್ತಿಯ ಮೂಲ ನೀನು: ಪತ್ನಿಯನ್ನು ಹಾಡಿಹೊಗಳಿದ ಶಿವರಾಜ್‌ ಸಿಂಗ್‌ ಚೌಹಾಣ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಭೋಪಾಲ್‌: ಮಧ್ಯಪ್ರದೇಶದ ವಿಧಾನಸಭೆಯ 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿಯು 19 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರವು ನಿರ್ಣಾಯಕ ಗೆಲುವು ದಾಖಲಿಸಿದೆ. ಈ ಅಭೂತಪೂರ್ಣ ಸಾಧನೆಯ ಹಿಂದೆ ತಮ್ಮ ಪತ್ನಿ ಇರುವುದಾಗಿ ಚೌಹಾಣ್‌ ಟ್ವೀಟ್‌ ಮಾಡಿದ್ದಾರೆ.

ಈ ವಿಚಾರವಾಗಿ ಬುಧವಾರ ಬೆಳಿಗ್ಗೆ ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು ತಮ್ಮ ಪತ್ನಿಯನ್ನು 'ಶಕ್ತಿ ಮತ್ತು ಸ್ಫೂರ್ತಿ' ಎಂದು ಹಾಡಿಹೊಗಳಿದ್ದಾರೆ.

'ನನ್ನ ಬದುಕಿನ ಪ್ರತಿ ವಿಜಯಕ್ಕೂ ನಿನ್ನ ಬೆಂಬಲವಿದೆ. ನನ್ನ ಶಕ್ತಿ ಮತ್ತು ಸ್ಫೂರ್ತಿಯ ಮೂಲ ನೀನು. ನೀನು ನನ್ನೊಂದಿಗಿದ್ದರೆ, ಗೆಲುವು ಯಾವಾಗಲೂ ನನ್ನದಾಗಿರುತ್ತದೆ' ಎಂದು ಚೌಹಾಣ್ ಶ್ಲಾಘಿಸಿದ್ದಾರೆ.

ಮಧ್ಯಪ್ರದೇಶದ ವಿಧಾನಸಭೆಯ 28 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ, 19ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು