ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಲ ಹಣ ವಶ ಪ್ರಕರಣ: ಎಸ್‌ಐಎ ತನಿಖೆ

Last Updated 13 ಏಪ್ರಿಲ್ 2022, 13:11 IST
ಅಕ್ಷರ ಗಾತ್ರ

ಜಮ್ಮು: ಮಾಜಿ ಸಚಿವ ಜತಿಂಧರ್ ಸಿಂಗ್ ಅಲಿಯಾಸ್ ಬಾಬು ಸಿಂಗ್ ಅವರು ಪ್ರಮುಖ ಆರೋಪಿಯಾಗಿರುವ ಹವಾಲಾ ಹಣ ವಶ ಪ್ರಕರಣದ ವಿಚಾರಣೆಯನ್ನು ಜಮ್ಮು ಮತ್ತು ಕಾಶ್ಮೀರದ ತನಿಖಾ ಸಂಸ್ಥೆಗೆ (ಎಸ್‌ಐಎ) ವಹಿಸಲಾಗಿದೆ.

ವಿಧ್ವಂಸಕ ಚಟುವಟಿಕೆಗಳಿಗೆ ಬಳಸಲು ಸಾಗಿಸಲಾಗುತ್ತಿದ್ದ ಹವಾಲಾ ಹಣವನ್ನು ಏಪ್ರಿಲ್‌ 6ರಂದು ಪೊಲೀಸರು ವಶಪಡಿಸಿಕೊಂಡು ಆರೋಪಿಯೊಬ್ಬನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಯು ಜತಿಂಧರ್ ಸಿಂಗ್ ಅವರ ಹೆಸರು ಬಹಿರಂಗಪಡಿಸಿದ್ದರಿಂದ ಏಪ್ರಿಲ್ 9 ರಂದು ಕಥುವಾ ಜಿಲ್ಲೆಯಲ್ಲಿ ಸಿಂಗ್‌ ಅವರನ್ನು ಬಂಧಿಸಲಾಗಿತ್ತು.

‘ಹವಾಲ ಹಣ ವಶ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆಯು ತನಿಖೆ ನಡೆಸಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT