ಮಂಗಳವಾರ, ಜೂನ್ 28, 2022
23 °C

ಕೊವೊವ್ಯಾಕ್ಸ್‌: ಮೂರನೇ ಹಂತದ ಪರೀಕ್ಷೆಗೆ ಅನುಮತಿ ಕೋರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಕೊವೊವ್ಯಾಕ್ಸ್‌ ಲಸಿಕೆಯಿಂದ ಎರಡರಿಂದ 18 ವರ್ಷದ ಮಕ್ಕಳಿಗೆ ರಕ್ಷಣೆ ಮತ್ತು ಅವರ ನಿರೋಧಕ ಶಕ್ತಿ ವೃದ್ಧಿ ಕುರಿತಂತೆ ಮೂರನೇ ಹಂತದ ಪ್ರಯೋಗ ನಡೆಸಲು ಅನುಮತಿ ನೀಡಬೇಕೆಂದು ಸೀರಂ ಇನ್‌ಸ್ಟಿಟ್ಯೂಟ್‌ ಸಂಸ್ಥೆಯು ಭಾರತೀಯ ಔಷಧಿ ಮಹಾ ನಿಯಂತ್ರಕರ (ಡಿಸಿಜಿಎ) ಅನುಮತಿ ಕೋರಿದೆ.‌

ವಯಸ್ಕರಿಗೆ ಈ ಲಸಿಕೆಯನ್ನು ಬೂಸ್ಟರ್‌ ಡೋಸ್‌ ಆಗಿ ನೀಡುವ ಮೂಲಕ ಪ್ರಯೋಗ ನಡೆಸಲು ಇಸಿಜಿಎ ಇದೇ ವರ್ಷದ ಮಾರ್ಚ್‌ ತಿಂಗಳಲ್ಲಿ ಸಂಸ್ಥೆಗೆ ಅನುಮತಿ ನೀಡಿತ್ತು.

ಈ ಕುರಿತು ಡಿಸಿಜಿಎಗೆ ಅರ್ಜಿ ನೀಡಿರುವ ಸಂಸ್ಥೆಯ ನಿರ್ದೇಶಕ ಪ್ರಕಾಶ್‌ ಸಿಂಗ್‌, ಕನಿಷ್ಠ 6 ತಿಂಗಳಿಗೂ ಹಿಂದೆ ಭಾರತದಲ್ಲಿ ಕೊರೊನಾ ವಿರುದ್ಧ ಕೊವೊವ್ಯಾಕ್ಸ್‌ನ್ನು ಪ್ರಾಥಮಿಕ ಲಸಿಕೆಯಾಗಿ ಪಡೆದ ಎರಡರಿಂದ 18 ವರ್ಷದ ಮಕ್ಕಳ ಮೇಲೆ ಮೂರನೇ ಹಂತದ ಪ್ರಯೋಗ ನಡೆಸಲು ಅನುಮತಿ ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು